ಗ್ರಾಮೀಣ ಭಾಗದ ಹಿರಿಯರ ಭಾಷಾ ಜ್ಞಾನದ ಸಂರಕ್ಷಣೆ ಅಗತ್ಯ : ಸಾಹಿತಿ ಶಿವಣ್ಣ ಇಂದ್ವಾಡಿ ಸಲಹೆ

 -ಶಾರುಕ್ ಖಾನ್, ಹನೂರು

ಹನೂರು:  ಯಾವುದೇ ಶಿಕ್ಷಣ ಪಡೆಯದ ನಮ್ಮ ಜನಪದರು ಮಲೆ ಮಹದೇಶ್ವರ, ಮಂಟೇಸ್ವಾಮಿ, ಮತ್ತು ಬಿಳಿಗಿರಿ ರಂಗನ ಕಾವ್ಯಗಳನ್ನು ಕಟ್ಟಿದ್ದಾರೆ. ನಮ್ಮ ಗ್ರಾಮೀಣ ಭಾಗದ ಹಿರಿಯರಲ್ಲಿ ಸಾಕಷ್ಟು ಭಾಷಾ ಜ್ಞಾನ ಅಡಗಿದ್ದು, ಅದನ್ನು ಸಂರಕ್ಷಿಸಬೇಕು ಅವರುಗಳು ನಿಧನರಾದರೆ ಗ್ರಂಥಾಲಯವೇ ನಾಶವಾದಂತೆ ಎಂದು ಸಾಹಿತಿ, ನಿವೃತ್ತ ಅಧ್ಯಾಪಕ ಶಿವಣ್ಣ ಇಂದ್ವಾಡಿ ಆತಂಕ ವ್ಯಕ್ತಪಡಿಸಿದರು. 
ಪಟ್ಟಣದ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಅವರ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಪ್ರತಿಯೊಬ್ಬ ವಿದ್ಯಾರ್ಥಿಗಳೂ ಬಾಲ್ಯದಿಂದಲೇ ಕನ್ನಡ ಭಾμÉ, ಸಾಹಿತ್ಯ, ನೆಲ, ಜಲವನ್ನು ಪ್ರೀತಿಸಬೇಕು. ಪರಸ್ಪರ ಸಂಬಂಧ ಬೆಳೆಸುವ ಮಕ್ಕಳ ಕಥೆ, ಲಾಲಿಪದಗಳು, ಹೊಲಗದ್ದೆಗಳಲ್ಲಿ ಹಾಡುವ ಜಾನಪದ ಹಾಡುಗಳು ಇಂದು ಮರೆಯಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಎಲ್ಲರ ಜೀವನ  ಯಾಂತ್ರಿಕವಾಗಿರುವ ಕಾರಣ ಪ್ರೀತಿ, ಭಾಂದವ್ಯ, ಸಂಬಂಧಗಳಿಂದ ದೂರ ಉಳಿಯುವಂತೆ ಮಾಡುತ್ತಿವೆ. ಇಂತಹ ಪರಿಸರದಲ್ಲಿ ನಾವು ಬದುಕುತ್ತಿರುವುದು ದುರಂತವೆ ಸರಿ, ಆದ್ದರಿಂದ ಪ್ರತಿಯೊಬ್ಬರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ನೆಲ, ಜಲ, ಸಾಹಿತ್ಯ ಮತ್ತು ನಮ್ಮ ಪರಿಸರವನ್ನು ಪ್ರೀತಿಸಿ ನಮ್ಮ ಬದುಕಿಗೆ ಏನು ಬೇಕೋ ಅದನ್ನು ಮಾತ್ರ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಶೈಲೇಶ್ ಕುಮಾರ್   ಮಾತನಾಡಿ, ಕನ್ನಡ ಭಾμÉ ಶುದ್ಧ, ವೈಜ್ಞಾನಿಕ ಮತ್ತು ಯಾವುದೇ ಸಂದರ್ಭದಲ್ಲಿಯೂ ಎಲ್ಲರಿಗೂ ಹೊಂದಿಕೊಳ್ಳುವ ಭಾμÉಯಾಗಿದೆ.  ಪ್ರತಿಯೊಬ್ಬರು ಭಾಲ್ಯದಿಂದಲೇ ಕನ್ನಡವನ್ನು ಪ್ರೀತಿಸಿ ಬೆಳೆಸಿ. ಕನ್ನಡದ ಹೊಸ ಹೊಸ ಪದಗಳನ್ನು ಕಲಿಯುವ ಪ್ರಯೋಗ ಮಾಡಿ. ಅದರಲ್ಲೂ ಚಾಮರಾಜನಗರದ ಕನ್ನಡವನ್ನ ಸಹಜವಾಗಿ ಬೆಳೆಸಿ ಎಂದು ತಿಳಿಸಿದರು.
ಹನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಮಲ್ಲೇಶ್ ಮಹಾಲಿಂಗನಕಟ್ಟೆ, ಕಾರ್ಯದರ್ಶಿ ಅಭಿಲಾμï, ವಿವೇಕಾನಂದ ಕಾಲೇಜು ಪ್ರಾಂಶುಪಾಲ ಮಧುಸೂಧನ್, ಸಂಚಾಲಕರಾದ ರಾಜೇಂದ್ರ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು