ಚಿಕ್ಕ ಮಾಲಪುರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಲಾವತಿ ಮಾದೇಶ್ ಅವಿರೋಧ ಆಯ್ಕೆ

-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಕಲಾವತಿ ಮಾದೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿ ಅವರು ರಾಜಿನಾಮೆ ನೀಡಿದ್ದ ಹಿನ್ನೆಲೆ ಈ ಸ್ಥಾನ ತೆರವಾಗಿತ್ತು. ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 
ಕಾಂಗ್ರೆಸ್ ಬೆಂಬಲಿತ 10, ಪಕ್ಷೇತರ ಇಬ್ಬರು ಹಾಗೂ ಬಿಜೆಪಿ ಬೆಂಬಲಿತ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಅಧಿಕಾರದ ಅವಧಿಯಲ್ಲಿ ಕಂಡಯ್ಯನ ಪಾಳ್ಯದಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಕಲಾವತಿ ಮಾದೇಶ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಗಂಗಾದರ್ ಕಲಾವತಿ ಮಾದೇಶ ಅವರನ್ನು  ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಭಿನಂದಿಸಿದರು. ಜತೆಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರುಗಳಾದ  ಪುಷ್ಪಾವತಿ  ರಾಜಮಣಿ, ನಾಗಣ್ಣ, ಪ್ರಭುಸ್ವಾಮಿ, ರಾಜಿ ಬಾಯಿ, ಚೆನ್ನಪ್ಪ, ಮಲ್ಲೇಶ್, ನಂಜುಂಡಸ್ವಾಮಿ, ಅಶೋಕ್, ಮುಖಂಡರುಗಳಾದ ವೆಂಕಟೇಶ್, ನಂಜುಂಡ ಶೆಟ್ಟಿ, ಕಂಡಯ್ಯನ ಪಾಳ್ಯ ಮಾದೇಶ್, ಉದ್ದನೂರು ಸಿದ್ದರಾಜು, ರುದ್ರಪ್ಪ, ಶಿವಣ್ಣ, ವೇಲು ಸ್ವಾಮಿ, ಮಲ್ಲು ಸ್ವಾಮಿ, ಅಂಕರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು