ಅಡ್ಡಂಡರಿಗೆ ಎಂಎಲ್‍ಸಿ, ಡಾ.ಎಸ್.ಎಲ್. ಭೈರಪ್ಪ ಅವರಿಗೆ ಜ್ಞಾನಪೀಠ ಅರ್ಜೇಂಟಾಗಿ ಬೇಕು ಅದಕ್ಕಾಗಿ ರಂಗಾಯಣದಲ್ಲಿ ಆರ್‍ಎಸ್‍ಎಸ್ ಸಿದ್ಧಾಂತಗಳ ಪ್ರಚಾರ : ಹೆಚ್.ವಿಶ್ವನಾಥ್ ಕಿಡಿ

ಅಡ್ಡಂಡ ಕಾರ್ಯಪ್ಪನನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಕ್ಕೆ ಆಗ್ರಹ

ಮೈಸೂರು : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವ ರಿಗೆ ಅರ್ಜೇಂಟಾಗಿ ಎಂಎಲ್‍ಸಿ ಆಗಬೇಕು, ಅದೇ ರೀತಿ ಹಿರಿಯ ಲೇಖಕ ಎಸ್.ಎಲ್.ಭೈರಪ್ಪ ಅವರಿಗೂ ಜ್ಞಾನಪೀಠ ಪ್ರಶಸ್ತಿಯ ಆಸೆ ಹೆಚ್ಚಾಗಿದೆ ಇದಕ್ಕಾಗಿ ಇವರು ರಂಗಾಯಣದಲ್ಲಿ ಆರ್‍ಎಸ್‍ಎಸ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಕಿಡಿ ಕಾರಿದರು.  
ಶನಿವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡಂಡ ತನ್ನ ಹೆಸರಿನ ಮುಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಂತಹ ಹೆಸರಿಟ್ಟುಕೊಂಡು ಇಡೀ ಕೊಡಗಿಗೆ ಅಪಮಾನ ಮಾಡುತ್ತಿದ್ದಾರೆ. ಇನ್ನು ಮುಂದೆ ಕಾರ್ಯಪ್ಪ ಅನ್ನುವ ಹೆಸರನ್ನ ತೆಗೆದು ಬಿಡುವುದು ಸೂಕ್ತ. ಇಂತಹ ಅನ್ನಾಡಿ ಅಡ್ಡಂಡ ಕಾರ್ಯಪ್ಪ ನೊಂದಿಗೆ ಸಾಹಿತ್ಯ ಲೋಕದ ಏತ್ತರದ ವ್ಯಕ್ತಿ ಭೈರಪ್ಪ ಸೇರಿರುವುದು ಸೂಕ್ತವಲ್ಲ.
ಭೈರಪ್ಪಗೆ ಅಜೆರ್ಂಟ್ ಆಗಿ ಜ್ಞಾನಪೀಠ ಬೇಕಿದೆ, ಕೊಟ್ಟುಬಿಡಿ ಎಂದ ಅವರು, ಮುಖ್ಯಮಂತ್ರಿಗಳು ಕೂಡಲೇ ಸಾಂಸ್ಕøತಿಕ ಲೋಕವನ್ನು ಹಾಳು ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪನನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ಅಡ್ಡಂಡ ಟಿಪ್ಪು ಬಗ್ಗೆ ಬರೆದ ಹಾಗೆ ಚಿಕ್ಕ ದೇವರಾಯನ ಕತೆಯನ್ನೂ ಬರೆಯಲಿ ನೋಡೋಣ ಎಂದರು.
ಹಣಕಾಸು ಸಚಿವರ ನೇಮಕಕ್ಕೆ ಆಗ್ರಹ : ಈಗಾಗಲೇ ಸಿಎಂ ಬಳಿ 8ರಿಂದ 10 ಖಾತೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅವುಗಳೆಲ್ಲಾ ಸತ್ತು ಹೋಗುತ್ತವೆ. ಯಾವ ಇಲಾಖೆಗಳಿಗೂ ನ್ಯಾಯ ಒದಗಿಸಲು ಆಗುವುದಿಲ್ಲ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು.
ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು.
ಆದರೆ ಸಿಎಂ ಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನ ಬೇರೆಯವರಿಗೆ ನೀಡಬೇಕು ಎಂದು ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
ಜಿಎಸ್‍ಟಿ ವಿರುದ್ಧ ಕಿಡಿ : ಮಹಾತ್ಮಾ ಗಾಂಧೀಜಿ ಅವರು, ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಅಂದು ಸತ್ಯಾಗ್ರಹ ಮಾಡಿದರು. ಆದರೀಗ ಬಿಜೆಪಿ ಸರ್ಕಾರ ಜಿಎಸ್‍ಟಿ ಮೂಲಕ ಅದೇ ಉಪ್ಪಿನ ಮೇಲೆ ತೆರಿಗೆ ಹಾಕಿದೆ. ರಾಜ್ಯದಲ್ಲಿ ಜಿಎಸ್‍ಟಿ ಯಿಂದ 24 ಸಾವಿರ ಕೋಟಿ ಸಂಗ್ರಹವಾಗುತ್ತಿದೆ.
ಈ ಪೈಕಿ 12 ಸಾವಿರ ಕೋಟಿ ಹಣವನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುತ್ತಿದ್ದಿವೆ. ಹೆಚ್ಚು ಜಿಎಸ್‍ಟಿ ಕಟ್ಟುವವರ ಪೈಕಿ 
ದೇಶದಲ್ಲಿ ನಾವೇ 2ನೆ ಸ್ಥಾನದಲ್ಲಿದ್ದೇವೆ. ಒಂದೆಡೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ತೆರಿಗೆ ವಂಚನೆಯಾಗುತ್ತಿದ್ದರೇ, ಮತ್ತೊಂದೆಡೆ ನಮ್ಮ ಪಾಲಿನ ತೆರಿಗೆ ಹಣ ಕೇಂದ್ರ ವಾಪಸ್ ನಮಗೆ ಕೊಡುತ್ತಿಲ್ಲ ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಶಿಕ್ಷಣ ಸೇವೆಗೆ ರಾಷ್ಟ್ರಪತಿಗಳಿಂದ ಸನ್ಮಾನ : ತಾವು ರಾಜ್ಯದ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಶೈಕ್ಷಣಿಕ ಪ್ರಗತಿಯನ್ನು ಕಂಡು ರಾಷ್ಟ್ರಪತಿಗಳು ನಮಗೆ ಸನ್ಮಾನ ಮಾಡಿದ್ದರು. ಆದರೀಗ ಸರ್ಕಾರ ಬಣ್ಣ ಹೊಡೆಯುವುದರಲ್ಲಿಯೂ ವಿವಾದ ಸೃಷ್ಟಿಸಿ ಶಿಕ್ಷಣವನ್ನು ಹಾಳು ಮಾಡುತ್ತಿದೆ. ಕಾಲೇಜು ಶಿಕ್ಷಣವೂ ಅಧ್ವಾನ ವಾಗಿದೆ. ಡಾಕ್ಟರೇಟ್ ಕ್ಯಾನ್ಸಲ್ ಆದವರಿಗೆ 5 ಕೋಟಿ ಪಡೆದು ವಿಸಿ ಸ್ಥಾನಕ್ಕೆ ಕೂರಿಸುತ್ತಿದ್ದಾರೆ. ಉಪಕುಲಪತಿ ಅವರಿಂದ ನೇಮಕಾತಿ ಮತ್ತು ಕಾಮಗಾರಿ ಮಾಡುವ ಅಧಿಕಾರ ಕಿತ್ತುಹಾಕಿದರೆ ಯಾರೂ ಈ ಸ್ಥಾನಕ್ಕೆ ಬರುವುದಿಲ್ಲ ಎಂದರು.
ಸಿದ್ದರಾಮಯ್ಯ ಎಲ್ಲಿ ನಿಂತ್ರೂ ಗೆಲ್ತಾರೆ : ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ಮಾತನಾಡಿದ ವಿಶ್ಬನಾಥ್, ಸಿದ್ದರಾಮಯ್ಯ ವರುಣಾ, ಕೋಲಾರ ಎಲ್ಲಿ ನಿಂತ್ರೂ ಗೆಲ್ತಾರೆ. ಆದರೆ ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹಾಗೆ ಮತ್ತೇ ಸೋಲಿಸಲು ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳು ಈಗ ತಂತ್ರಗಾರಿಕೆಯ ಅ ಆ ಇ ಈ ಪ್ರಾರಂಭಿಸಿವೆ ಎಂದರು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು