ಹನೂರು ತಾಲ್ಲೂಕಿನ ಒಡೆಯರ ಪಾಳ್ಯ ಕೆರೆ ಒತ್ತುವರಿ ತೆರವು

ಹನೂರು : ತಾಲ್ಲೂಕಿನ ಒಡೆಯರಪಾಳ್ಯ ಕೆರೆ ಒತ್ತುವರಿ ಪ್ರದೇಶವನ್ನು ಪಿಡಿಒ ಕಾಶವ್ವ ನೇತೃತ್ವದಲ್ಲಿ ಇಂದು ಕಾರ್ಯಾಚರಣೆ ನಡೆಸುವ ಮೂಲಕ ತೆರವುಗೊಳಿಸಲಾಯಿತು. ಕಳೆದ ಹಲವು ವರ್ಷಗಳಿಂದಲೂ ಈ ಕೆರೆ ಒತ್ತುವರಿಯನ್ನು ತೆರವು ಮಾಡಬೇಕು ಎಂಬುದು ಈ ಭಾಗದ ಪ್ರಜ್ಞಾವಂತ ಯುವಕರ ಆಗ್ರಹವಾಗಿತ್ತು. 
ಇತ್ತೀಚೆಗೆ ಸರ್ಕಾರ ರಾಜ್ಯದ ಹಲವಾರು ಕಡೆ ಕೆರೆ ಒತ್ತುವರಿ ಮಾಡಿದ ನಿದರ್ಶನಗಳನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು, ಅವರ ಸೂಚನೆ ಮೇರೆಗೆ
ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಒಡೆಯರ ಪಾಳ್ಯ ಕೆರೆ ಒತ್ತುವರಿ ತೆರವಿಗೆ ಆದೇಶ ಹೂರಡಿಸಿದ ಹಿನ್ನೆಲೆ ಶುಕ್ರವಾರ ಗ್ರಾಮ ಪಂಚಾಯಿತಿ ಪಿಡಿಒ ಕಾಶವ್ವ ನೇತೃತ್ವದಲ್ಲಿ ತೆರವು ಮಾಡಲಾಯಿತು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು