ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ ಮಾಜಿ ಎಂಎಲ್‍ಸಿ ಸಿ.ರಮೇಶ್ ಅವರನ್ನು ``ಗೆಟ್ ಔಟ್’’ ಎಂದು ಆಚೆ ಕಳಿಸಿದ ಸಂಸದ ಶ್ರೀನಿವಾಸ ಪ್ರಸಾದ್

ತಿ.ನರಸೀಪುರ : ಸಂಸದ ಶ್ರೀನಿವಾಸ ಪ್ರಸಾದ್ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಅಧಿಕಾರಿಗಳ ವಿರುದ್ಧ ಹರಿಹಾಯ್ದ ವೇಳೆ ತೀವ್ರ ಅಸಮಾಧಾನಗೊಂಡ ಶ್ರೀನಿವಾಸ ಪ್ರಸಾದ್ ಕೆಂಡ ಮಂಡಲರಾಗಿ ರಮೇಶ್ ಅವರನ್ನು `ಗೆಟ್ ಔಟ್’ ಎಂದು ಗದರಿ ಆಚೆ ಕಳುಹಿಸಿದ ಘಟನೆ ಬುಧವಾರ ಟಿ.ನರಸೀಪುರದಲ್ಲಿ ನಡೆಯಿತು. 
ಘಟನೆ ವಿವರ : ಪಟ್ಟಣದ ತಲಕಾಡು ಮುಖ್ಯ ರಸ್ತೆಯ ಹಳೆ ಸಂತೆಮಾಳದ ಬಳಿ 4 ಕೋಟಿ 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲೋಕೋಪಯೋಗಿ ಇಲಾಖೆ ಕಛೇರಿ ಹಾಗೂ ಅತಿ ಗಣ್ಯರ ಅತಿಥಿ ಗೃಹವನ್ನು ಸ್ಥಳೀಯ ಶಾಸಕ ಎಂ.ಅಶ್ವಿನ್ ಜೊತೆಯಲ್ಲಿ ಉದ್ಘಾಟನೆ ಮಾಡಿದ ಬಳಿಕ ಸಂಸದರಾದ ಶ್ರೀನಿವಾಸ ಪ್ರಸಾದ್ ಅಧಿಕಾರಿಗಳ ಜೊತೆ ಚರ್ಚೆ ನಡೆಸುತಿದ್ದ ಸಂದರ್ಭದಲ್ಲಿ ಆಹ್ವಾನ ಪತ್ರಿಕೆ ಕೂಡುವಲ್ಲಿ ಲೋಪ ಮಾಡಿ ನನ್ನನ್ನ ಅವಮಾನಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಮಾಜಿ ಎಂಎಲ್‍ಸಿ ಸಿ.ರಮೇಶ್ ಹೇಳುತಿದ್ದಂತೆ ಸಿಟ್ಟಿಗೆದ್ದ ಶ್ರೀನಿವಾಸ್ ಪ್ರಸಾದ್ ನಿನ್ನದು ಇದ್ದುದ್ದೆ ರಾಮಾಯಣ ಆಚೆ ಹೋಗು ಎಂದು ಗದರಿ ಕಳುಹಿಸಿದರು.
ಮುಂದುವರಿದು ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಚಿರಾಗಿದ್ದ ಸಂದರ್ಭದಲ್ಲಿ ಒಂದು ಉನ್ನತ ಮಟ್ಟದ ಅತಿಥಿ ಗೃಹ ಮತ್ತು ನೂತನ ಲೋಕೋಪಯೋಗಿ ಕಛೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು ಅವರು ಬಿಡುಗಡೆ ಮಾಡಿದ ಅನುದಾನ ಉತ್ತಮ ರೀತಿಯಲ್ಲಿ ಬಳಕೆಯಾಗಿ ಅಚ್ಚುಕಟ್ಟಾದ ಅತಿ ಗಣ್ಯರ ಅತಿಥಿ ಗೃಹ ಮತ್ತು ಲೋಕೋಪಯೋಗಿ ಕಛೇರಿ ನಿರ್ಮಾಣವಾಗಿ ಪೀಠೋಪಕರಣ ಇಲ್ಲದೆ ಉದ್ಘಾಟನೆ ಆಗಿರಲಿಲ್ಲ ನಂತರ 
ಇಲ್ಲಿಗೆ ಬೇಕಾದ ಪೀಠೋಪಕರಣಕ್ಕೆ ಅನುದಾನ ನೀಡಿ ಇಂದು ಉದ್ಘಾಟನೆ ಮಾಡಿದ್ದೇನೆ ಅಧಿಕಾರಿಗಳು ಕಛೇರಿ ಮತ್ತು ಅತಿಥಿ ಗೃಹವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮದನ್ ರಾಜ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯ ಎಸ್.ಕೆ.ಕಿರಣ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಬಸವೇಗೌಡ, ಜಿಲ್ಲಾ ಕಾರ್ಯದರ್ಶಿ ಬಸವರಾಜು, ಜಿಲ್ಲಾ ರೈತಮೋರ್ಚ ಪ್ರದಾನ ಕಾರ್ಯದರ್ಶಿ ಕೆಬ್ಬೆಹುಂಡಿ ಶಿವಕುಮಾರ್, ಮುಖಂಡರುಗಳಾದ ದಾಸಯ್ಯ, ಹಿರಿಯೂರು ಪರಶಿವಮೂರ್ತಿ, ಮಹದೇವಯ್ಯ, ಕರುಹಟ್ಟಿ ಪ್ರಭುಸ್ವಾಮಿ, ಬಡ್ಡು ಶಿವಕುಮಾರ್, ಅಪ್ಪುಗೌಡ ಲೋಕೋಪಯೋಗಿ ಇಲಾಖೆ,
 ಅಧೀಕ್ಷಕ ಇಂಜಿನಿಯರ್ ಆರ್.ಗಣೇಶ್, ತಹಶೀಲ್ದಾರ್ ಸಿ.ಜಿ.ಗೀತಾ, ಕಾರ್ಯಪಾಲಕ ಇಂಜಿನೀಯರ್ ಜಿ.ರಾಜು, ಎಇಇ. ಎಚ್.ನಟೇಶ್, ತಾ.ಪಂ. ಇಓ ಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಹಾಸಿನಿ,  ಸಿ.ಪಿ.ಐ ಕೃಷ್ಣಪ್ಪ ಸೇರಿದಂತೆ  ಮತ್ತಿತರರು ಹಾಜರಿದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು