ಮೈಸೂರಿನ ಎಟಿಎಂಇ ಇಂಜಿನೀಯರಿಂಗ್ ಕಾಲೇಜಿಗೆ ನ್ಯಾಕ್ ಎ+ ಮಾನ್ಯತೆ
ನವೆಂಬರ್ 16, 2022
ಮೈಸೂರು : ನಗರದ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜು 2022-23ನೇ ಸಾಲಿನಿಂದ 5 ವರ್ಷಗಳ ಅವಧಿಗೆ ನ್ಯಾಕ್ ಎ+ ಮಾನ್ಯತೆಯ ಗರಿಯನ್ನು ದೊರೆತ ಜಿಲ್ಲೆಯ ಮೊದಲ ತಾಂತ್ರಿಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಲೇಜಿನ ಅಧ್ಯಕ್ಷ ಅರುಣ್‍ಕುಮಾರ್ ಮಾತನಾಡಿ, ಮೈಸೂರಿನ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಮೊದಲ ಆವೃತ್ತಿಯಲ್ಲೇ ಎ+ ಮಾನ್ಯತೆ ಪಡೆದ ಮೊದಲ ಕಾಲೇಜು ಹಾಗೂ ವಿಟಿಯು ಮೈಸೂರು ವಲಯದಲ್ಲಿ 2ನೇ ಕಾಲೇಜು ಎಂಬ ಹೆಗ್ಗಳಿಕೆಗೆ ಎಟಿಎಂಇ ಪಾತ್ರವಾಗಿದೆ. ರಾಜ್ಯದಲ್ಲಿ ಎ+ ಮಾನ್ಯತೆ ಪಡೆದ 7ನೇ ಕಾಲೇಜಾಗಿದ್ದು, ಈ ಮಾನ್ಯತೆ ಪಡೆದ ಅತ್ಯಂತ ಕಿರಿಯ ಕಾಲೇಜು ಎಂಬ ಪ್ರಶಂಸೆಗೂ ಭಾಜನವಾಗಿದೆ. ಅಲ್ಲದೆ ದೇಶದಲ್ಲಿ ಮೊದಲ ಆವೃತ್ತಿಯಲ್ಲೇ ಈ ಸಾಧನೆ ಮಾಡಿದ 47ನೇ ಕಾಲೇಜಾಗಿದೆ ಎಂದು ತಿಳಿಸಿದರು. 2010ರಲ್ಲಿ ಆರಂಭವಾದ ಕಾಲೇಜು ಕಡಿಮೆ ಅವಧಿಯಲ್ಲೇ ಉತ್ತಮ ಸಾಧನೆ ಮಾಡಿದೆ. 2019ರಲ್ಲಿ ಸಂಸ್ಥೆಯ 4 ಇಂಜಿನಿಯರಿಂಗ್ ವಿಭಾಗಗಳಿಗೆ ಎನ್‍ಬಿಎ ಮಾನ್ಯತೆ ದೊರೆತಿದೆ. 2021ರಲ್ಲಿ ಕಾಲೇಜು ಸಿದ್ಧಪಡಿಸಿದ್ದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುಮೋದನೆ ನೀಡಿ ಯೋಜನೆಯ ಅನುμÁ್ಠನಕ್ಕೆ 2.4 ಕೋಟಿ ಮಂಜೂರು ಮಾಡಿದೆ. ಗ್ರಾಮೀಣ ಪ್ರದೇಶದ 7ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಯೋಜನೆಗೆ 17.90 ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಆವಿμÁ್ಕರ ಮತ್ತು ಹೊಸ ತಂತ್ರಜ್ಞಾನ ಕೇಂದ್ರಿತ ಸಂಶೋಧನೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಯೋಜನೆಗೆ 2 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ವಿದ್ಯಾಸೆರೆ ಯೋಜನೆ:
ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ವಿದ್ಯಾಸೆರೆ ಯೋಜನೆ ಆರಂಭಿಸಲಾಗಿದೆ. ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ, ಸಿಇಟಿಯಲ್ಲಿ 5 ಸಾವಿರದೊಳಗೆ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಶೇ.90ರಿಂದ 95 ಅಂಕ ಪಡೆದು, 10 ಸಾವಿರ ರ್ಯಾಂಕ್ ಒಳಗಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.75 ರಷ್ಟು ರಿಯಾಯಿತಿ, ಶೇ.85 ಕ್ಕಿಂತ ಹೆಚ್ಚು ಅಂಕ, ಸಿಇಟಿಯಲ್ಲಿ 15 ಸಾವಿರದೊಳಗೆ ರ್ಯಾಂಕ್ ಒಳಗಿರುವವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಪ್ರಸ್ತುತ 50 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಕಾಲೇಜಿನ ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ವೀರೇಶ್, ಪ್ರಾಂಶುಪಾಲ ಡಾ.ಬಸವರಾಜು.ಎಲ್, ಮಹೇಶ್ ಇದ್ದರು.
0 ಕಾಮೆಂಟ್‌ಗಳು