ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಪ್ರೊ.ಎಂ ಕೃಷ್ಣೇಗೌಡರನ್ನು ಅಭಿನಂದಿಸಿದ ಎಚ್.ಮಂಜುನಾಥ್ ಸಹೋದರರು
ನವೆಂಬರ್ 09, 2022
ಮೈಸೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಹೆಸರಾಂತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಮಂಜುನಾಥ್ ಹಾಗೂ ಕೆಪಿಸಿಸಿ ಸದಸ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್. ತ್ಯಾಗರಾಜ್ ಅವರು ಮೈಸೂರಿನಲ್ಲಿ ಅಭಿನಂದಿಸಿದರು. ಬುಧವಾರ ಬೆಳಿಗ್ಗೆ ಮೈಸೂರಿನ ಕೃಷ್ಣೇಗೌಡರ ನಿವಾಸಕ್ಕೆ ತೆರಳಿ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ ಫಲ ತಾಂಬೂಲ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎಚ್.ತ್ಯಾಗರಾಜು ಮಾತನಾಡಿ, ಕೃಷ್ಣೇಗೌಡರು ಮೂಲತಃ ಪಾಂಡವಪುರ ತಾಲ್ಲೂಕಿನವರು. ತಮ್ಮ ಹಾಸ್ಯ ಮಿಶ್ರಿತ ಜನೋಪಯೋಗಿ ಮಾತಿನಿಂದ ಇಂದು ರಾಜ್ಯದ ಮನೆ ಮಾತಾಗಿದ್ದಾರೆ. ಇವರಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ ನಮ್ಮ ತಾಲ್ಲೂಕಿನ ಜನತೆಗೆ ಹೆಮ್ಮೆಯನ್ನು ತಂದಿದೆ ಎಂದರು. ಈ ಸಂದರ್ಭದಲ್ಲಿ ನಿವೃತ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ಮಹಾರಾಣಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ್, ವಯಸ್ಕರ ಶಿಕ್ಷಣ ಇಲಾಖೆಯ ನಿವೃತ ಅಧಿಕಾರಿ ಶಂಕರೇಗೌಡ, ಮಂಡ್ಯ ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರ ಮೂರ್ತಿ, ಲಕ್ಷ್ಮಿಸಾಗರ ರಾಜಣ್ಣ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು