1.35 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಚಾಲನೆ
ನವೆಂಬರ್ 09, 2022
ಮೈಸೂರು : ಮುಡಾ ಅನುದಾನ ಸುಮಾರು 1.35 ಕೋಟಿ ವೆಚ್ಚದಲ್ಲಿ ನಗರದ ಸಾತಗಳ್ಳಿ 1ನೇ ಹಂತ ಬಡಾವಣೆಯಲ್ಲಿ ಡಾ.ರಾಜ್‍ಕುಮಾರ್ ರಸ್ತೆಯಿಂದ ಹೊರ ವರ್ತುಲ ರಸ್ತೆವರೆಗೆ ಬರುವ ಮೂರು ಪ್ರಮುಖ ರಸ್ತೆಗಳು ಮತ್ತು ಕೆಲವು ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತನ್ವೀರ್ ಸೇಠ್ ಬುಧವಾರ ಭೂಮಿಪೂಜೆ ಸಲ್ಲಿಸಿದರು. ಸಾತಗಳ್ಳಿ 1ನೇ ಹಂತದ 1ನೇ ಮುಖ್ಯ ರಸ್ತೆ 650 ಮೀಟರ್, (ಶಮ್ಸ್ ಫಂಕ್ಷನ್ ಹಾಲ್ ರಸ್ತೆ), ಸೆಂಟ್ ಜೋಸೆಫ್ ಕಾಲೇಜ್ ರಸ್ತೆ 760 ಮೀಟರ್ ಮತ್ತು ವಿಟಿಯು ಕಾಲೇಜ್ ರಸ್ತೆಯಲ್ಲಿ 800 ಮೀಟರ್ ರಸ್ತೆ ಡಾಂಬನರೀಕರಣಕ್ಕೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಸಿ.ಶೌಕತ್ ಪಾಷ ಮಾತನಾಡಿ,
ಅಪಖ್ಯಾತಿಗೆ ಒಳಗಾಗಿದ್ದ ಸೆಲ್ಯೂಷನ್ ಪಾರ್ಕ್ ಅಭಿವೃದ್ಧಿಗೆ ಶಿಕ್ಷಣ ತಜ್ಞ ಖಾಲಿದ್ ಬೇಗ್ ನದ್ವಿ ಅವರಿಂದ ಸಹಾಯ
34ನೇ ವಾರ್ಡಿನಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕೆಲವು ಚರಂಡಿಗಳು, ಒಳ ರಸ್ತೆಗಳು ಮತ್ತು ಪಾರ್ಕ್ ಅಭಿವೃದ್ಧಿಯಾಗಬೇಕಿದೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಉದ್ಯಾನವನದಲ್ಲಿ ಕೆಲವು ಮಾಧಕ ವ್ಯಸನಿಗಳು ಸೇರಿಕೊಂಡು ದಿನನಿತ್ಯ ಅಲ್ಲಿ ಮಾಧಕ ವಸ್ತಗಳ ಸೇವನೆ ಮಾಡುತ್ತಿದ್ದ ಕಾರಣ ಅದಕ್ಕೆ ಸೆಲ್ಯೂಷನ್ ಪಾರ್ಕ್ ಎಂಬ ಅಡ್ಡ ಹೆಸರು ಬಂದು ಅಪಖ್ಯಾತಿಗೆ ಒಳಗಾಗಿತ್ತು. ಈಗ ಖಾಲಿದ್ ಬೇಗ್ ನದ್ವಿ ಎಂಬ ಶಿಕ್ಷಣ ತಜ್ಞರು ತಮ್ಮ ವೈಯುಕ್ತಿಕ ನಿಧಿಯಿಂದ ಈ ಪಾರ್ಕ್ ಅಭಿವೃದ್ಧಿಗೆ ಮುಂದಾಗಿದ್ದಾರೆ. ಮಾಧಕ ವ್ಯಸನಿಗಳಿಗೆ ವಿವಿಧ ಕ್ರೀಡೆಗಳಲ್ಲಿ ಉತ್ತೇಜನ ನೀಡಿ ಅವರನ್ನು ಕ್ರೀಡಾಪಟುಗಳನ್ನಾಗಿ ಮಾರ್ಪಾಡು ಮಾಡುವಲ್ಲಿ ಅವರು ಬಹಳ ಶ್ರಮ ವಹಿಸಿದ್ದಾರೆ ಎಂದು ವಿವರಿಸಿದರು. ನಮ್ಮ ವಾರ್ಡಿಗೆ ದಸರಾ ಅನುದಾನ ಯಾವುದೂ ಕೊಟ್ಟಿಲ್ಲ. ಮನೆ ಮನೆ ಸದರಾಕ್ಕೆ 2 ಲಕ್ಷ ಹಣ ನೀಡಲಾಗಿತ್ತು ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು. ಮಹಾನಗರಪಾಲಿಕೆ ಸದಸ್ಯರಾದ ಹಾಜಿರಾ ಸೀಮಾ ಶೌಕತ್, ಅಬೂಬಕ್ಕರ್, ಎಹತೇಶಾಮ್ ಮೊಹಮ್ಮದ್, ಅಬ್ರಾರ್ ಮೊಹಮ್ಮದ್, ಎಂ.ಕೆ.ಕಲೀಂ, ಮತ್ತಿತರರು ಇದ್ದರು.
0 ಕಾಮೆಂಟ್‌ಗಳು