ಮದ್ದೂರು ತಾಲ್ಲೂಕಿನಾದ್ಯಂತ ಕದಲೂರು ಉದಯ್ ಅಭಿಮಾನಿಗಳ ಸಂಘ ಸ್ಥಾಪನೆ
ನವೆಂಬರ್ 12, 2022
-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೂಕಿನ ಬೊಮ್ಮನದೊಡ್ಡಿ ಹಾಗೂ ತೊರೆಚಾಕನಹಳ್ಳಿ ಗ್ರಾಮಗಳ ಯುವಕರು ತಮ್ಮ ಹೆಸರಿನಲ್ಲಿ ನೂತನವಾಗಿ ಸ್ಥಾಪಿಸಿರುವ ಅಭಿಮಾನಿಗಳ ಸಂಘವನ್ನು ಸಮಾಜ ಸೇವಕ ಕದಲೂರು ಉದಯ್ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ, ತಾಲೂಕಿನ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಅನೇಕ ಜನರ ಕಷ್ಟ ಸುಖಗಳ ಭಾಗಿಯಾಗಿದ್ದೇನೆ. ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿ ದುಡಿಯುತ್ತೇನೆ. ತಾಲೂಕಿನ ಸರ್ಕಾರಿ ಶಾಲೆಗಳು, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ನೆರವು ನೀಡಿದ್ದೇನೆ. ಮುಂದೆಯೂ ಈ ಸೇವೆ ಮುಂದುವರಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಗುರುದೇವರಹಳ್ಳಿ ಗ್ರಾಮದ ಬಳಿ ಅರೇಕಲ್ ದೊಡ್ಡಿ ಗ್ರಾಮದ ರೈತ ಪುಟ್ಟ ಎಂಬವರಿಗೆ ಸೇರಿದ ಎತು ಆಕಸ್ಮಿಕವಾಗಿ ಸಾವನ್ನಪ್ಪಿದ್ದನ್ನು ಕಂಡು ಸಾಂತ್ವಾನ ಹೇಳಿದ ಉದಯ್ ರೈತ ಪುಟ್ಟ ಅವರಿಗೆ ಆರ್ಥಿಕ ನೆರವು ನೀಡಿದರು.
0 ಕಾಮೆಂಟ್‌ಗಳು