ಶಾಲಾ ಕಟ್ಟಡದ ಟೆರೆಸ್ ಮೇಲೆ ಮಧ್ಯಪಾನ ಮಾಡಿ, ಆಸ್ತಿ ನಷ್ಟ ಮಾ ಡಿದ ದುಷ್ಕರ್ಮಿಗಳ ವಿರುದ್ಧ ದೂರು
ನವೆಂಬರ್ 12, 2022
-ಶಾರುಕ್ ಖಾನ್, ಹನೂರು
ಹನೂರು : ರಾತ್ರಿ ವೇಳೆ ಶಾಲೆಯ ಆವರಣಕ್ಕೆ ನುಗ್ಗಿ ಟೆರೆಸ್ ಮೇಲೆ ಮದ್ಯಪಾನ ಮಾಡಿದ್ದಲ್ಲದೇ, ಶಾಲೆಯ ಆಸ್ತಿ ಹಾನಿ ಮಾಡಿರುವ ಘಟನೆ ತಾಲ್ಲೂಕಿನ ಎಲ್ಲೆಮಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಶಾಲೆಗೆ ಆಗಮಿಸಿದ ಶಿಕ್ಷಕರು ಮತ್ತು ಮಕ್ಕಳು ಶಾಲೆಯ ಮುಂಭಾಗದ ಹೂವಿನ ಕುಂಡಗಳನ್ನು ಒಡೆದು ಹಾಕಿರುವುದನ್ನು ಕಂಡು ಗಾಭರಿಯಾಗಿ ಎಸ್‍ಡಿಎಂಸಿ ಸಮಿತಿಗೆ ವಿಷಯ ತಿಳಿಸಿದರು,
ಅವರು ಬಂದು ನೋಡಲಾಗಿ ಶಾಲೆ ಕಟ್ಟಡದ ಮೇಲ್ಬಾಗದಲ್ಲಿ ಕೆಲವರು ಮಧ್ಯಪಾನ ಮಾಡಿ ಖಾಲಿ ಬಾಟಲ್‍ಗಳನ್ನು ಅಲ್ಲಿಯೇ ಬಿಟ್ಟು ಹೂವಿನ ಕುಂಡಗಳನ್ನು ಒಡೆದು ಹಾಕಿರುವುದು ಬೆಳಕಿಗೆ ಬಂತು. ಘಟನೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಭಂಗ ತರುವುದಲ್ಲದೇ ಮಕ್ಕಳಲ್ಲಿ ಭಯದ ವಾತಾವರಣದ ಉಂಟಾಗಿದ್ದು ಈ ಬಗ್ಗೆ ಶಿಕ್ಷಕರು ಮತ್ತು ಎಸ್‍ಡಿಎಂಸಿ ಸದಸ್ಯರು ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು. ಮುಖ್ಯ ಶಿಕ್ಷಕರಾದ ನಾಗಕನ್ನಿಕಾಲಕ್ಷ್ಮಿ ಹಾಗೂ ಶಿಕ್ಷಕ ರಾಜು ಇದ್ದರು.
0 ಕಾಮೆಂಟ್‌ಗಳು