3.5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.3 ರಲ್ಲಿ ಗೋಕುಲಂ 3ನೇ ಹಂತ ತ್ರಿನೇತ್ರ ಸರ್ಕಲ್ ನಿಂದ ವಿಜಯನಗರ 2ನೇ ಹಂತ ವಾಟರ್ ಟ್ಯಾಂಕ್ ವರೆಗಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ 3.5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಹಲವು ದಿನಗಳಿಂದ ಈ ಭಾಗದ ರಸ್ತೆ ತೀವ್ರ ಹದಗೆಟ್ಟಿತ್ತು. ಈ ಭಾಗದ ಜನರ ಬಹುದಿನದ ಬೇಡಿಕೆ ಈಗ ಈಡೇರಿದೆ. 15 ದಿನದೊಳಗೆ ಮೆಟ್ಲಿಂಗ್ ಮಾಡಿ, ರಸ್ತೆಯ ಎರಡೂ ಬದಿಯಲ್ಲೂ ಚರಂಡಿ ನಿರ್ಮಿಸಿ ನಂತರ ಗುಣ ಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದರು.

ಕೆಂಪೇಗೌಡರ ಜಯಂತಿ ಆಚರಣೆಯಲ್ಲಿ ದೇವೇಗೌಡರು, ಸಿದ್ಧರಾಮಯ್ಯರಿಗೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳೇ ಖುದ್ದು ದೇವೇಗೌಡರಿಗೆ ಆಹ್ವಾನ ನೀಡಿದ್ದರು. ಅದರಂತೆಯೇ ಎಲ್ಲ ಮುಖಂಡರನ್ನು ಕರೆಯಲಾಗಿತ್ತು. ಯಾರೆಲ್ಲಾ ಕೆಂಪೇಗೌಡರ ಅಭಿಮಾನಿಗಳಿದ್ದರೋ ಅವರೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದರು ಎಂದರು.
ಈ ಸಂದರ್ಭದಲ್ಲಿ ಮಹಾ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಸೋಮಣ್ಣ, ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಇದ್ದರು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು