ಜೆಡಿಎಸ್ ಬಿಟ್ಟು ಸ್ವತಂತ್ರವಾಗಿ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ : ಡಿ.ಸಿ. ತಮ್ಮಣ್ಣ

 -ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ಮುಂಬರುವ ಸಾರ್ವತ್ರಿಕ  ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬಿಟ್ಟು ಯಾವುದೇ ರಾಷ್ಟ್ರೀಯ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಶಾಸಕ ಡಿ.ಸಿ ತಮ್ಮಣ್ಣ ತಿಳಿಸಿದರು.
ತಾಲೂಕಿನ ಭಾರತಿನಗರ ವ್ಯಾಪ್ತಿಯ ಮೆಳ್ಳಹಳ್ಳಿ, ಕೆ.ಪಿ. ದೊಡ್ಡಿ, ಮಣಿಗೆರೆ, ಬಿದರಹೊಸಹಳ್ಳಿ ಹಾಗೂ ಯಲಾದಹಳ್ಳಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಳಿಕ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಹಿಂದಿನ ಸಮಿಶ್ರ  ಸರ್ಕಾರದಲ್ಲಿ ರೈತರಿಗೆ ಕೊಟ್ಟ ಮಾತಿಗೆ ತಪ್ಪದೆ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ರೈತರ ಪರವಾಗಿ ಆಡಳಿತ ನಡೆಸಿದ್ದಾರೆ ಹೀಗಾಗಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಮುಖಂಡರಾದ ಚಿಕ್ಕತಿಮ್ಮೇಗೌಡ, ಬಿಳಿಗೌಡ, ರಾಜಣ್ಣ, ಹೊನ್ನೇಗೌಡ, ಮರಿ ಮಾದೇಗೌಡ, ಕೆ.ಟಿ ಸುರೇಶ್, ರಘು ವೆಂಕಟೆಗೌಡ, ಅರವಿಂದ್,  ಮೂರ್ತಿ, ಯೋಗೇಶ್, ಮಲ್ಲರಾಜು, ಗ್ರಾಪಂ ಅಧ್ಯಕ್ಷ ಹೂತಗರೆ ರವಿಕುಮಾರ್, ಗ್ರಾಪಂ ಸದಸ್ಯರಾದ ಸಿದ್ದರಾಜು, ಮನು ಮುಂತಾದವರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು