ಮಾದಪ್ಪನ ಹುಂಡಿಯಲ್ಲಿ 36 ದಿನದಲ್ಲಿ 2.50 ಕೋಟಿ ನಗದು : 122 ಗ್ರಾಂ ಚಿನ್ನ, 2.710 ಗ್ರಾಂ ಬೆಳ್ಳಿ ಸಂಗ್ರಹ

-ಶಾರುಕ್ ಖಾನ್, ಹನೂರು

ಹನೂರು : ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 2.50 ಕೋಟಿ ರೂ ಸಂಗ್ರಹವಾಗಿದೆ.
ಇಲ್ಲಿನ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಣಾವಲು ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ನಡೆಯಿತು.  
ಕಳೆದ 36 ದಿನಗಳ ಅವಧಿಯಲ್ಲಿ 2 ಕೋಟಿ 50 ಲಕ್ಷದ 85 ಸಾವಿರದ 794 ರೂ. 122 ಗ್ರಾಂ ಚಿನ್ನ ಹಾಗೂ 2.710 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಎಣಿಕೆ ಸಂದರ್ಭದಲ್ಲಿ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ, ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್, ದ್ವಿತೀಯ ದರ್ಜೆ ಸಹಾಯಕ ಮಹದೇವಸ್ವಾಮಿ, ಸಿಬ್ಬಂದಿಗಳಾದ ಜನಾರ್ದನ, ಮಲ್ಲಿಕಾರ್ಜುನಪ್ಪ, ನಾಗರಾಜು, ಮಾದೇಶ್, ಬ್ಯಾಂಕ್ ವ್ಯವಸ್ಥಾಪಕರು, ಮಹದೇಶ್ವರ ಬೆಟ್ಟ ವೃತ್ತ ನಿರೀಕ್ಷಕ ಬಸವರಾಜು ಇದ್ದರು.