ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ಟೈರ್ ಜಾಮ್ ನಡೆದ ಘಟನೆ
ಶ್ರೀರಂಗಪಟ್ಟಣ : ವೇಗವಾಗಿ ಬರುತ್ತಿದ್ದ ಕಾರಿನ ಚಕ್ರಕ್ಕೆ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ವ್ಹೀಲ್ ಜಾಮ್ ಆಗಿ ಕಾರು ಪಲ್ಟಿ ಹೊಡೆದ ಘಟನೆ ಮೈಸೂರು-ಬೆಂಗಳೂರು ಹೆದ್ದಾಗಿ ಶ್ರೀರಂಗಪಟ್ಟಣ ಬಳಿಯ ಪಶ್ಚಿಮವಾಹಿನಿ ವೃತ್ತದ ಬಳಿ ಶನಿವಾರ ಮದ್ಯಾಹ್ನ ನಡೆಯಿತು.
ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕಾರು ಪಶ್ಚಿಮವಾಹಿನಿ ವೃತ್ತದ ಬಳಿ ಬರುತ್ತಿದ್ದಂತೆ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ ಕಾರಿನ ಚಕ್ರಕ್ಕೆ ಸುತ್ತಿಕೊಂಡು ಜಾಮ್ ಆಯಿತು. ಈ ವೇಳೆ ಗಾಭರಿಯಾದ ಕಾರು ಚಾಲಕ ಬ್ರೇಕ್ ಹಾಕಿದಾಗ ಕಾರು ರಸ್ತೆ ಎಡಬದಿಯ ಮಾರ್ಗಸೂಚಿ ಕಂಬಕ್ಕೆ ಡಿಕ್ಕಿ ಹೊಡೆದು ಭತ್ತದ ಗದ್ದೆಯಲ್ಲಿ ಪಲ್ಟಿ ಹೊಡೆಯಿತು. ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಪಲ್ಟಿ ಹೊಡೆದ ಕಾರಿನಲ್ಲಿದ್ದ ಮೂವರು ಪ್ರಯಾಣಿಕರನ್ನು ಸುರಕ್ಷಿತಾಗಿ ಹೊರಕ್ಕೆಳೆದರು.
ಘಟನೆಯಲ್ಲಿ ಬೆಂಗಳೂರು ಮೂಲದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ತಕ್ಷಣ ಅವರನ್ನು ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
0 ಕಾಮೆಂಟ್‌ಗಳು