ಪ್ರತಿಮೆ ನಿರ್ಮಾಣ ತನ್ವೀರ್ ಸೇಠ್ ವೈಯುಕ್ತಿಕ ಅಭಿಪ್ರಾಯ : ಎನ್‍ಆರ್ ಕ್ಷೇತ್ರ ಅಭಿವೃದ್ಧಿಪಡಿಸಲು ಒತ್ತಾಯ
ಮೈಸೂರು : ಶಾಂತಿ, ಸೌಹಾರ್ಧತೆಯ ನೆಲೆ ಮತ್ತು ಸಾಂಸ್ಕøತಿಕ ರಾಜಧಾನಿ ಮೈಸೂರು ಇತ್ತೀಚೆಗೆ ಕೆಟ್ಟ ಕಾರಣಗಳಿಗಾಗಿ ಸುದ್ದಿ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮ್ಜದ್‍ಖಾನ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಪ್ಪುವಿನ ಬಗ್ಗೆ ಸುಳ್ಳು, ಸುಳ್ಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ರೀತಿಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಕೃತಿ ರಚಿಸಿ, ಅದನ್ನು ಆಧರಿಸಿದ ನಾಟಕ ಪ್ರದರ್ಶಿಸಹೊರಟಿರುವುದು ಖಂಡನೀಯವಾಗಿದೆ. ಹೀಗಾಗಿ ಸರ್ಕಾರ ಆ ಕೃತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ನಾಟಕ ಪ್ರದರ್ಶನಕ್ಕೆ ತಡೆಯೊಡ್ಡಬೇಕೆಂದು ಆಗ್ರಹಿಸಿದರು.
ಅಲ್ಲದೆ, ಆ ಕೃತಿ ಬಿಡುಗಡೆಗಾಗಿ ರಂಗಾಯಣ ವೇದಿಕೆ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜೊತೆಗೆ ಹಿರಿಯ ಸಾಹಿತಿಯಾದ ಡಾ.ಎಸ್.ಎಲ್. ಭೈರಪ್ಪ ಅವರು ನಿಕೃಷ್ಟ ವ್ಯಕ್ತಿಗಳೊಡನೆ ವೇದಿಕೆ ಹಂಚಿಕೊಂಡಿರುವುದು ಸರಿಯಲ್ಲ. ಅವರು ತಮ್ಮ ಘನತೆ ಉಳಿಸಿಕೊಳ್ಳುವ ರೀತಿ ವರ್ತಿಸಬೇಕಾಗಿತ್ತೆಂದರು.
ಜೊತೆಗೆ, ಅಡ್ಡಂಡ ಸಿ. ಕಾರ್ಯಪ್ಪ ರಚಿಸಿರುವ ಪುಸ್ತಕ ರಾಜ್ಯಕ್ಕೆ ಕಂಟಕದ್ದಾಗಿದೆ. ಹೀಗಾಗಿ ಸುಮೊಟೊ ಪ್ರಕರಣ ದಾಖಲಿಸಿ ಕೃತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
ಬಳಿಕ, ಟಿಪ್ಪು ಪ್ರತಿಮೆ ನಿರ್ಮಿಸಿರುವುದಾಗಿ ಶಾಸಕ ತನ್ವೀರ್‍ಸೇಠ್ ನೀಡಿರುವ ಹೇಳಿಕೆ ವೈಯಕ್ತಿದ್ದಾಗಿದೆ. ಆದರೆ ಆ ಬಗ್ಗೆ ಸಾಂವಿಧಾನಿಕವಾಗಿ ವಿರೋಧ ವ್ಯಕ್ತಪಡಿಸುವ ಬದಲು ಕೊಲೆ ಬೆದರಿಕೆ ಹಾಕಿರುವುದು, ಗಿರಿಧರ್ ಎಂಬುವವರು ತನ್ವೀರ್‍ಸೇಠ್ ಅವರನ್ನು ಸಂಹಾರ ಮಾಡಬೇಕೆಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಹೀಗಾಗಿ ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.
ಇದೇ ವೇಳೆ, ಎನ್.ಆರ್. ಕ್ಷೇತ್ರದಲ್ಲಿ ಎಲ್ಲೆಲ್ಲೂ ಮೂಲಸೌಕರ್ಯ ಕೊರತೆಯಿದೆ. ಈಗಿನ ಶಾಸಕರು ಅತ್ಯಂತ ಕೆಟ್ಟ ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ಇದರ ವಿರುದ್ಧ ಎಸ್‍ಡಿಪಿಐ ನಿರಂತರ ಹೋರಾಟ ನಡೆಸಲಿದೆ ಎಂದರು.
ದೇವನೂರು ಪುಟ್ಟನಂಜಯ್ಯ, ರಫತ್‍ಖಾನ್, ಸ್ವಾಮಿ ಹಾಜರಿದ್ದರು.
0 ಕಾಮೆಂಟ್‌ಗಳು