ಪಾಂಡವಪುರದಲ್ಲಿ ಮೂರು ದಿನಗಳ ``ಪುನೀತೋತ್ಸವ’’ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ : ಶೃಂಗಾರಗೊಳ್ಳುತ್ತಿರುವ ಪಾಂಡವ ಕ್ರೀಡಾಂಗಣ

ಪಾಂಡವಪುರ : ನವೆಂಬರ್, 25 ರಿಂದ ಮೂರು ದಿನಗಳ ಕಾಲ ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಏರ್ಪಡಿಸಿರುವ ``ಪುನೀತೋತ್ಸವ’’ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಕಲಾ ರಸಿಕರಿಗೆ ರಸದೌತಣ ಬಡಿಸಲು ಪಾಂಡವ ಕ್ರೀಡಾಂಗಣವನ್ನು ಶೃಂಗರಿಸಲಾಗುತ್ತಿದೆ.  
ಈ ವಿಷಯವಾಗಿ ಶಾಸಕ ಸಿ.ಎಸ್.ಪುಟ್ಟರಾಜು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆ ನಮ್ಮ ಕಣ್ತೆರೆಸಿದೆ. ಅವರ ಸ್ಮರಣೆ ಚಿರಸ್ತಾಯಿಯಾಗಿ ಉಳಿಯಲು ಮೂರು ದಿನಗಳ ಕಾಲ ನಮ್ಮ ತಾಲ್ಲೂಕಿನ ಕೇಂದ್ರ ಸ್ಥಾನವಾದ ಪಾಂಡವಪುರದಲ್ಲಿ ಅದ್ಧೂರಿಯಾಗಿ ಸಾಂಸ್ಕøತಿಕ ಸಂಭ್ರಮವನ್ನು ನಡೆಸುತ್ತಿದ್ದೇವೆ ಎಂದರು. 

ನವೆಂಬರ್ 25 ರ ಸಂಜೆ ಚಿತ್ರನಟ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಪಿಇಎಸ್ ಬಾಲಕೀಯರ ಶಾಲೆಯ ಒಂದು ಸಾವಿರ ವಿಧ್ಯಾರ್ಥಿನಿಯರಿಂದ ಸಾಮೂಹಿಕ ಗಾಯನದ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪ್ರೊಫೆಸರ್ ಕೃμÉ್ಣಗೌಡ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.
ಮೂರು ದಿನಗಳ ಕಾಲ ನಡೆಯಲಿರುವ ಮನೋರಂಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಹೊಣೆಯನ್ನು ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಹರ್ಷಗೆ ವಹಿಸಲಾಗಿದೆ. ಅನನ್ಯ ಭಟ್ ಸಂಗೀತ ಕಾರ್ಯಕ್ರಮ, ಅರ್ಜುನ್ ಜನ್ಯ ಸೇರಿದಂತೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಡಾ.ರಾಜ್ ಕುಟುಂಬದ ಸದಸ್ಯರು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಪುನೀತ್ ರಾಜ್ ಕುಮಾರ್ ರ ಸಮಾಜಮುಖಿ ಕೆಲಸಗಳ ಪ್ರೇರಣೆ ಹಿನ್ನಲೆ ಪುನೀತ್ ನಮನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಅರ್ಚನಾಚಂದ್ರು, ಸದಸ್ಯರಾದ ಶಿವಣ್ಣ, ಬಿ.ವೈ.ಬಾಬು, ಇಮ್ರಾನ್ ಷರೀಫ್, ಚಂದ್ರು, ಶಿವಕುಮಾರ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು