ಡಾ.ಬಾಬು ಜಗಜೀವನರಾಮ್ ನಗರದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಸಿ.ಎಸ್.ಪುಟ್ಟರಾಜು
ನವೆಂಬರ್ 14, 2022
ಪಾಂಡವಪುರ : ಪಟ್ಟಣದ ಡಾ. ಬಾಬು ಜಗಜೀವನರಾಮ್ ನಗರದ ಎಸ್‍ಸಿ ಕಾಲೂನಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಸಿ.ಎಸ್.ಪುಟ್ಟರಾಜು ಸೋಮವಾರ ಉದ್ಘಾಟಿಸಿದರು. 2017-18ನೇ ಸಾಲಿನ ಆರ್‍ಐಡಿಎಫ್ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಾಲೂನಿಯ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಮುಖಂಡ ಟೌನ್ ಚಂದ್ರು ಅವರು, ಶಾಸಕ ಸಿಎಸ್ ಪುಟ್ಟರಾಜು, ನೂತನ ಉಪ ವಿಭಾಗಾಧಿಕಾರಿ ನೋಂಗ್ ಜೈ ಮೊಹಮ್ಮದ್ ಅಲಿ ಅಕ್ರಮ್ ಪಾಷ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುರಸಭೆ ಸದಸ್ಯರುಗಳು ಮತ್ತು ಬಡಾವಣೆಯ ಮುಖಂಡರಿಗೆ ಹಾರ ಹಾಕಿ ಗೌರವಿಸಿದರು. ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯರಾದ ಚಿಕ್ಕತಮ್ಮೇಗೌಡ, ಖಮರುನ್ನಿಸಾ ಇಷರತ್ ಪಾಷಾ, ಗಿರೀಶ್, ಸೋಮಶೇಖರ್, ಶಿವಕುಮಾರ್, ಇಮ್ರಾನ್ ಷರೀಫ್, ಕೃಷ್ಣ, ಬಿ.ವೈ.ಬಾಬು, ಶಿವಣ್ಣ, ಚಂದ್ರು, ಗೀತಾ, ಮುಖಂಡರಾದ ಪಿ.ಎಸ್.ಲಿಂಗರಾಜು(ಗುಣ), ಬೊಮ್ಮರಾಜು, ರಮೇಶ್, ಪಿ.ಎಲ್.ಆದರ್ಶ, ಗುರು, ರಾಚಪ್ಪ ಪುರಸಭೆ ಎಂಜಿನಿಯರ್ ಚೌಡಪ್ಪ, ಹಿರಿಯ ಆರೋಗ್ಯ ಪರೀಕ್ಷಕ ಕಾಳಯ್ಯ, ರಮೇಶ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು