ಕೆ.ಎನ್.ಪುರ ಬಡಾವಣೆಯಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಮಲೆ ಮಹದೇಶ್ವರ ಮತ್ತು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ 7ನೇ ವರ್ಷದ ಪೂಜಾ ಮಹೋತ್ಸವ

ಮೈಸೂರು : ನಗರದ ಕೆ.ಎನ್.ಪುರ ಬಡಾವಣೆಯಲ್ಲಿರುವ ಶ್ರೀ ಮಲೆ ಮಹದೇಶ್ವರ ಮತ್ತು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ 7ನೇ ವರ್ಷದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 8 ಗಂಟೆಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪುಣ್ಯಾಹ ನಾಂದಿ, ಕಲಶಾರಾಧನೆ, ಮಹಾ ಮೃತ್ಯಂಜಯ ಯಾಗ, ನವಗ್ರಹ, ಗಣಪತಿ ಹೋಮ ನಡೆಯಿತು. ನಂತರ ಕುಂಭಾಭಿಷೇಕ, ಮದ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಡೆದು ಸಾವಿರಾರು ಜನರಿಗೆ ಅನ್ನಸಂಪರ್ತಣೆ ಮಾಡಲಾಯಿತು.

ಮಾಜಿ ಮೇಯರ್ ಶ್ರೀಕಂಠೇಗೌಡ ಸೇರಿದಂತೆ ಹಲವಾರು ಗಣ್ಯರು, ಬಡಾವಣೆಯ ಮುಖಂಡರು, ನೂರಾರು ಮಹಿಳೆಯರು ಮಹಾ ಮಂಗಳಾರತಿಯಲ್ಲಿ ಭಾಗವಹಿಸಿದ್ದರು.
7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂರಾರು ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಆಟೋಟಗಳು, ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಆಟೋಟಗಳಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ಮಾಜಿ ಮೇಯರ್ ಶ್ರೀಕಂಠೇಗೌಡ ಬಹುಮಾನ ವಿತರಣೆ ಮಾಡಿದರು. 

ಮಾಜಿ ಮೇಯರ್ ಶ್ರೀಕಂಠೇಗೌಡ ಮಾತನಾಡಿ, ಕಳೆದ 7 ವರ್ಷಗಳಿಂದ ಈ ದೇವಾಲಯವನ್ನು ಕಾಂಕ್ರಿಟ್ ರಾಜು ಮತ್ತು ಅವರ ಗೆಳೆಯರು ಬಡಾವಣೆಯ ಜನತೆಯ ಸಹಕಾರದೊಂದಿಗೆ ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ದೇವಾಲಯದ ಪೂಜಾ ಕಾರ್ಯಗಳ ಜತೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿರುವುದು ಸಂತಸ ತಂದಿದೆ. 

ಬಹುತೇಕ ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಬಡಾವಣೆಯಲ್ಲಿ ಕಳೆದ 2 ವರ್ಷಗಳಲ್ಲಿ ನಮ್ಮನ್ನು ಕಾಡಿದ ಕರೋನಾದಿಂದ ನೂರಾರು ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸಿದ್ದವು. ಇಂತಹ ಸಂದರ್ಭದಲ್ಲಿ ಕಾಂಕ್ರಿಟ್ ರಾಜು ಅವರು ತಮ್ಮ ಗೆಳೆಯರ ಜತೆಗೂಡಿ ಸಾವಿರಾರು ಜನರಿಗೆ ಆಹಾರ ಕಿಟ್‍ಗಳನ್ನು ವಿತರಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. 

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾಂಕ್ರಿಟ್ ರಾಜು ಮಾತನಾಡಿ, ಇದು 200 ವರ್ಷದ ಹಳೆಯ ದೇವಾಲಯ. ಶಿಥಿಲವಾಗಿತ್ತು. ನಾವು ಕಳೆದ 7 ವರ್ಷಗಳಿಂದ ಇದರ ಜೀರ್ಣೋದ್ಧಾರ ಮಾಡಿ ಈಗ 7ನೇ ವರ್ಷದ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ. ಸಂಸದರಾದ ಪ್ರೆತಾಪ್ ಸಿಂಹ ಮತ್ತು ಮೇಯರ್ ಶಿವಕುಮಾರ್ ಅವರು ದೇವಾಲಯಕ್ಕೆ ಬರಲು ಆಹ್ವಾನ ನೀಡಿದ್ದೇವೆ. ಭಕ್ತರ ಸಹಕಾರದೊಂದಿಗೆ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿವ ಕಾರ್ಯಕ್ರಮ ಇದೆ. ಇದರೊಂದಿಗೆ ಈ ಭಾಗದ  ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವುದರ ಜತೆಗೆ ಮಕ್ಕಳು ಮತ್ತು ಮಹಿಳೆಯರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಂಬರೀಶ್, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ಪದ್ಮನಾಭ, ನಿರ್ದೇಶಕರಾದ ಎಂ.ಕೆ.ಮಹದೇವ, ರಾಘವೇಂದ್ರ ಮೂರ್ತಿ, ಶಂಕರಣ್ಣ, ಕಾಂಕ್ರಿಟ್ ಶ್ರೀಧರ್ ಮುಂತಾದವರು ಇದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು