ಬದುಕಲು ಇಂಗ್ಲಿಷ್, ಹಿಂದಿಯೇ ಬೇಕಿಲ್ಲ, ಕನ್ನಡ ಕಲಿತವರಿಗೆ ಸಾಕಷ್ಟು ಅವಕಾಶಗಳಿವೆ : ತಹಸೀಲ್ದಾರ್ ನಯನಾ

ಸಮಾಜ ಸೇವಕ ವಿಷ್ಣು ವಿಠಲ, ಹೋರಾಟಗಾರರಾದ ಬೊಮ್ಮರಾಜು, ಕಣಿವೇ ಯೋಗೇಶ್ ಸೇರಿದಂತೆ ಹಲವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 

 ಪಾಂಡವಪುರ : ಜೀವನ ನಡೆಸಲು ಬರೀ ಹಿಂದಿ, ಇಂಗ್ಲಿμï ಭಾμÉಯೇ ಮುಖ್ಯವಲ್ಲ. ಕನ್ನಡ ಭಾμÉಯಲ್ಲೂ ಐಎಎಸ್‍ನಂತಹ ಪರೀಕ್ಷೆ ಬರೆಯಲು ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ನಯನಾ ತಿಳಿಸಿದರು. 
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕನ್ನಡ ಭಾμÉಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಆ ಮೂಲಕ ಭಾμÉಯ ಪೋಷಣೆ ಮಾಡಬೇಕು ಎಂದರು.
ಉದ್ಯಮಿ ಹುಲ್ಕೆರೆಕೊಪ್ಪಲು ಮಧುಸೂದನ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾμÉಯ ಉಳಿವಿಗೆ ಹೋರಾಟ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವಿμÁಧ ವ್ಯಕ್ತಪಡಿಸಿದರು.
ಕರ್ನಾಟಕದ ಗಡಿಭಾಗಗಳಲ್ಲಿ ಕನ್ನಡ ಭಾμÉಯ ಉಳಿಸಬೇಕಾದ ಸ್ಥಿತಿ ಎದುರಾಗಿದ್ದು, ರಾಜ್ಯದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಕನ್ನಡ ಭಾμÉಯ ಉಳಿವಿಗಾಗಿ ಹೋರಾಟ ನಡೆಸುತ್ತಿವೆ. ರಾಜ್ಯದಲ್ಲಿ ಸಾಕಷ್ಟು ಪ್ರಾಮಾಣಿಕ ಅಧಿಕಾರಿಗಳಿದ್ದು ಅವರ ಸಹಕಾರ ಪಡೆದುಕೊಂಡು ನಾಡಿನ ಗಡಿಭಾಗದಲ್ಲಿ ಕನ್ನಡ ಭಾμÉ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.

ಇದೇವೇಳೆ ಡಾ.ಸಿದ್ದೇಗೌಡ (ವೈದ್ಯಕೀಯ), ಮೈಚಲ (ಸಾಹಿತ್ಯ), ಅಶ್ವಥ್‍ಕುಮಾರ್ (ರಂಗಭೂಮಿ), ಶ್ರೀನಿವಾಸಗೌಡ (ತತ್ವಪದ), ಶಿವಲಿಂಗಪ್ಪ (ಧಾರ್ಮಿಕ ಸೇವೆ), ದೇವೇಗೌಡ (ಸಾವಯವಕೃಷಿ), ವಕೀಲ ಕಣಿವೆ ಯೋಗೇಶ್ ಹಾಗೂ ದಲಿತ ಮುಖಂಡ (ಹೋರಾಟ) ಪ್ರಕಾಶ್ ರಾಜ್ ಗೌಡ ಹಾಗೂ ರಘುವೀರ್ (ಪತ್ರಿಕೋದ್ಯಮ), ಸುರೇಶ್ (ಸಮಾಜಸೇವೆ), ಸಂತೋμïಸಿಂಹ ( ಸಂಘಟನೆ), ವಿಷ್ಣುವಿಠಲ್ (ಸಮಾಜಸೇವೆ), ಮುರಳಿ(ನೃತ್ಯ), ಐ.ಕೆ.ವಿಜೇತ (ಭರತನಾಟ್ಯ), ಗಜೇಂದ್ರ(ಕನ್ನಡಸೇವೆ), ವಿದ್ಯಾಧರ(ವಾದ್ಯ), ಯೋಗೇಶ್(ಆರೋಗ್ಯಸೇವೆ), ತಿಮ್ಮಪ್ಪ(ಆಟೋಸೇವೆ), ಜಯಮ್ಮ(ಸೋಭಾನೆ ಪದ) ಮಹಾಂತ್(ಕ್ರೀಡೆ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಸಹ ಪ್ರಾಧ್ಯಾಪಕ ಡಾ.ಪಿ.ಬೆಟ್ಟೇಗೌಡ ಪ್ರಧಾನ ಭಾಷಣ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಹಾಸ್ಯನಟ ಜಿ.ಚಂದ್ರಪ್ರಭಾ, ಉದ್ಯಮಿ, ಪಾಂಡವಾಸ್ ಲಯನ್ಸ್ ಅಧ್ಯಕ್ಷ ಎಸ್.ಡಿ.ಶಿವಕುಮಾರ್, ಹಾಪ್‍ಕಾಮ್ಸ್ ನಿರ್ದೇಶಕ ಪುಟ್ಟೇಗೌಡ, ಪುರಸಭೆ ಸದಸ್ಯರಾದ ಹಾರೋಹಳ್ಳಿ ಕೃಷ್ಣ, ಎನ್.ಚಂದ್ರಶೇಖರ್, ಸಾಹಿತಿ ಚಂದ್ರಶೇಖರಯ್ಯ, ಶಿವರಾಜು, ಪುಟ್ಟೇಗೌಡ, ಕಸಾಪ ಕಾರ್ಯದರ್ಶಿ ನಂಜುಂಡಸ್ವಾಮಿ ಸೇರಿದಂತೆ ಹಲವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು