2.90 ಕೋಟಿ ವೆಚ್ಚದಲ್ಲಿ 20 ಲಕ್ಷ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭೂಮಿಪೂಜೆ
ನವೆಂಬರ್ 16, 2022
ಮೈಸೂರು : ನಗರದ 19ನೇ ವಾರ್ಡಿನ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗ ಸುಮಾರು 2.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯೆ ಭಾಗ್ಯಮ್ಮ ಮಹದೇಶ್ ಬುಧವಾರ ಭೂಮಿಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, 2021-22 ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಈ ಕಾಮಗಾರಿ ಹಣ ಮಂಜೂರಾಗಿದೆ ಎಂದರು.
ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್ ಮಾತನಾಡಿ, ಈ ಭಾಗದಲ್ಲಿ ಸುಮಾರು 60 ವರ್ಷದ ಹಿಂದೆ ನಿರ್ಮಿಸಿದ್ದ ನೀರಿನ ಟ್ಯಾಂಕ್ ಶಿಥಿಲವಾಗಿತ್ತು. ಜತೆಗೆ ಸೋರುತ್ತಿತ್ತು. ಕುಸಿಯುವ ಸಂಭವ ಇದ್ದುದ್ದರಿಂದ ಸ್ಥಳಕ್ಕೆ ಪಾಲಿಕೆ ಆಯುಕ್ತರನ್ನು ಕರೆದು ಪರಿಶೀಲನೆ ನಡೆಸಿ ಕೂಡಲೇ ಇದನ್ನು ಕೌನ್ಸಿಲ್ ಸಭೆಯಲ್ಲಿಟ್ಟು ನೂತನ ಟ್ಯಾಂಕ್ ನಿರ್ಮಾಣಕ್ಕೆ 2,90 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಈಗಾಗಲೇ ನನ್ನ ವಾರ್ಡಿನಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು. ಮುಖಂಡರಾದ ಪುನೀತ್, ಗಿರೀಶ್, ನಾಗೇಶ್, ಯುಜಿಡಿ, ವಾಟರ್ ಸಪ್ಲೈ ಸೂಪರಿಟೆಂಡೆಂಟ್ ಎಂಜಿನಿಯರ್ ಅಶ್ವೀನ್, ಮುದ್ದು ಮಲ್ಲೇಗೌಡ ಇನ್ನಿತರರು ಇದ್ದರು.
ಇದಕ್ಕೂ ಮುನ್ನ ಅವರು ಮೈಸೂರು ಮಹಾನಗರ ಪಾಲಿಕೆ 21 ನೇ ವಾರ್ಡಿನಲ್ಲಿ ಪಾಲಿಕೆ ಸದಸ್ಯೆ ವೇದಾವತಿ ಅವರೊಂದಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುದಾನ ರೂ.40 ಲಕ್ಷದಲ್ಲಿ ಕುಕ್ಕರಹಳ್ಳಿಯ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಮೈಸೂರು ಮಹಾನಗರಪಾಲಿಕೆ ಉಪ ಆಯುಕ್ತರಾದ (ಅಭಿವೃದ್ದಿ) ಮಹೇಶ್, ಅಭಿವೃದ್ದಿ ಅಧಿಕಾರಿ ಹೇಗಾನಂದ, ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಪುನೀತ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಮೇಶ್, ಮುಖಂಡರುಗಳಾದ, ಶಿವಶಂಕರ್, ನವೀನ, ಚಲುವ, ಯಜಮಾನರುಗಳಾದ ಅಂದಾನಿ, ನಾರಾಯಣ, ಶಿವಣ್ಣ, ಪುರುಶೋತ್ತಮ. ಮಹದೇವು, ಸುನಿಲ್, ಮಾದೇಶ್, ನಂಜುಂಡಸ್ವಾಮಿ ಮುಂತಾದವರು ಹಾಜರಿದ್ದರು.
0 ಕಾಮೆಂಟ್‌ಗಳು