ಔಷಧ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 15 ಜನರು ಅಸ್ವಸ್ಥ

ವರದಿ-ಅಂತನಹಳ್ಳಿ ಬಾಲಕೃಷ್ಣ, ಮಂಡ್ಯ
ಮಂಡ್ಯ : ಔಷಧ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 15 ಜನರು ಅಸ್ವಸ್ಥಗೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ಕೊಪ್ಪ ಸಮೀಪದ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಘಟನೆ ವಿವರ : ಬಳ್ಳಾರಿಯಿಂದ ಕಬ್ಬು ಕಟಾವಿಗೆ ಬಂದಿದ್ದ 30 ಜನರ ಕುಟುಂಬವೊಂದು ಬಳ್ಳೇಕೆರೆ ಬಳಿ ಬೀಡುಬಿಟ್ಟಿದ್ದು, ಕಬ್ಬು ಕಟಾವಿಗೆಂದು ಬಳ್ಳೇಕೆರೆಯಿಂದ ಹೊಸಕೊಪ್ಪಲಿಗೆ ಬಂದ ವೇಳೆ 
ಸಮೀಪದ ಜಮೀನಿನ ಬಳಿ ಕ್ರಿಮಿನಾಶಕ ಔಷಧಿ ಸಿಂಪಡಿಸಿದ್ದ ಡ್ರಮ್ ನಲ್ಲಿದ್ದ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆಂದು ತಿಳಿದುಬಂದಿದೆ.

ಅಸ್ವಸ್ಥ 7 ಮಕ್ಕಳಿಗೆ ಮಕ್ಕಳ ವಾರ್ಡ್ ನಲ್ಲಿ ಹಾಗೂ ದೊಡ್ಡವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಿಮ್ಸ್ ನಿರ್ದೇಶಕ  ಡಾ.ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು