ರೌಡಿ ಶೀಟರ್ ಅರುಣ್ ಅಲಿಯಾಸ್ `ಕಪ್ಪೆ’ ಕೊಲೆ : 7 ಜನ ಆರೋಪಿಗಳ ಬಂಧನ
ನವೆಂಬರ್ 28, 2022
-ಟಿ.ಬಿ.ಸಂತೋಷ, ಮದ್ದೂರು ಮಂಡ್ಯ : ಮದ್ದೂರು ತಾಲ್ಲೂಕು ಭಾರತೀನಗರ ಸಮೀಪದ ದೊಡ್ಡರಸಿನಕೆರೆಯಲ್ಲಿ ನ. 20 ರಂದು ನಡೆದ ರೌಡಿ ಶೀಟರ್ ಅರುಣ್ ಅಲಿಯಾಸ್ `ಕಪ್ಪೆ’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಂ.ದೊಡ್ಡಿ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ದೊಡ್ಡಯ್ಯ, ಅಭಿμÉೀಕ್ ಆಲಿಯಾಸ್ ಗಜ, ಪುಟ್ಟಸ್ವಾಮಿ ಆಲಿಯಾಸ್ ಬೆಳ್ಳ, ದೇವರಾಜು, ರಾಘವೇಂದ್ರ, ಚಂದು, ಅರವಿಂದ ಬಂಧಿತರು. 4 ಜನ ಆರೋಪಿಗಳನ್ನು ಮಂಡ್ಯ ಬಸ್ ನಿಲ್ದಾಣದಲ್ಲಿ. ಮೂವರನ್ನು ಮದ್ದೂರಿನ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಅರುಣ್ ಅಲಿಯಾಸ್ ಕಪ್ಪೆ ಜತೆ ಮೇಲ್ಕಂಡ 7 ಜನರು ಮಾತಿನ ಚಕಮಕಿ ನಡೆಸಿ ಜಗಳವಾಡಿದ್ದರು. ಇದು ವಿಕೋಪಕ್ಕೆ ತಿರುಗಿತ್ತು. ಘಟನೆಯಲ್ಲಿ ದೊಡ್ಡಯ್ಯ ಹಾಗೂ ಆತನ ಸಹಚರರು ಅರುಣ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ನಂತರ ಸ್ಥಳದಲ್ಲಿದ್ದ ಸ್ನೇಹಿತರು ಗಲಾಟೆ ಬಿಡಿಸಿ ಗಾಯಗೊಂಡಿದ್ದ ಅರುಣ್ ಅಲಿಯಾಸ್ ಕಪ್ಪೆಯನ್ನು ಅಸ್ಪತ್ರೆಗೆ ಕರೆದೊಯ್ಯುವ ವೇಳೆ ದೇವರಹಳ್ಳಿಯಿಂದ ಕೆ.ಎಂ.ದೊಡ್ಡಿಗೆ ಹೋಗುವ ಮಾರ್ಗ ಮಧ್ಯೆ ಅಡ್ಡಗಟ್ಟಿದ ಇದೇ ತಂಡ ಅರುಣ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ನಂತರ ಅರುಣ್ ಅಲಿಯಾಸ್ ಕಪ್ಪೆ ಯನ್ನು ಚಿಕಿತ್ಸೆಗಾಗಿ ಜಿ.ಮಾದೇಗೌಡ ಅಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕೆತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನ.20 ರಂದು ಅರುಣ್ ಮೃತಪಟ್ಟಿದ್ದನು. ಪ್ರಕರಣದ ತನಿಖಾ ತಂಡದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಭೀಮಪ್ಪ ಬನಾಸಿ, ಸಿಬ್ಬಂದಿಗಳಾದ ಪ್ರಭುಸ್ವಾಮಿ, ಮೋಹನ್, ವಿಠಲ್ ಕರಿಗಾರ್, ಮಹೇಶ್, ರಾಜಶೇಖರ್, ಸುಬ್ರಮಣಿ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು