ಸರಳತೆಯೇ ಮರಿದೇವೇಗೌಡರ ದೊಡ್ಡ ಶಕ್ತಿ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಮೊದಲನೇ ವರ್ಷದ ಪುಣ್ಯ ಸ್ಮರಣೆ, `ಜನಸೇವಾ’ ಪ್ರಶಸ್ತಿ ಪ್ರದಾನ, `ಗುಣವಂತ’ ಸಂಸ್ಮರಣ ಗ್ರಂಥ ಬಿಡುಗಡೆ 

ನಜೀರ್ ಅಹಮದ್, ಪಾಂಡವಪುರ

 ಪಾಂಡವಪುರ : ರಾಜಕಾರಣ ಮತ್ತು ತಮ್ಮ ವೈಯುಕ್ತಿಕ ಬದುಕಿನ ಸರಳತೆಯೇ ದಿ.ಮರಿದೇವೇಗೌಡರ ದೊಡ್ಡ ಶಕ್ತಿಯಾಗಿತ್ತು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಚಿಕ್ಕಾಡೆ ಶ್ರೀ ಮರಿದೇವೇಗೌಡರ ಜನಕಲ್ಯಾಣ ಪ್ರತಿಷ್ಠಾನ ಆಯೋಜಿಸಿದ್ದ ಮರಿದೇವೇಗೌಡರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಜನಸೇವಾ ಪ್ರಶಸ್ತಿ ಪ್ರದಾನ
ಹಾಗೂ ಮರಿದೇವೇಗೌಡರ ಸಂಸ್ಮರಣ ಗ್ರಂಥ ಗುಣವಂತ
ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ದಿವಂಗತ ಮರಿದೇವೇಗೌಡರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದರೂ ಅಂದಿನ ಕಾಲದಲ್ಲೇ ಬಿಎಸ್‌ಸಿ ವಿಜ್ಞಾನ ಪದವಿ ಪಡೆದು ಯಾವುದೇ ಉದ್ಯೋಗಕ್ಕೆ ಹೋಗದೆ ಸಮಾಜ ಸೇವೆಯಲ್ಲಿ ತೊಡಗಿದ್ದು ಅವರ ಜನಪರ ಕಾಳಜಿಯನ್ನು ತೋರುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅನುಯಾಯಿಯಾಗಿ ಸುಮಾರು ೫೨ ವರ್ಷಗಳ ಕಾಲ ಸಭ್ಯ ರಾಜಕಾರಣ ನಡೆಸಿದ ಅಪರೂಪದ ವ್ಯಕ್ತಿ. ವಿವಿಧ ಹುದ್ದೆಗಳನ್ನು ಪಡೆದು ತಾಲ್ಲೂಕಿನ ಜನತೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ವಯೋವೃದ್ಧರಾದ ಎನ್.ಟಿ. ರಂಗನಾಥ್ ಅವರಿಗೆ ಮರಿದೇವೇಗೌಡರ ಸ್ಮಾರಕ ಜನಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜತೆಗೆ ಮರಿದೇವೇಗೌಡ ಬದುಕು, ಮೌಲ್ಯಗಳನ್ನು ಕುರಿತ ಗುಣವಂತ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಲಾಯಿತು.
ಶಾಸಕ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕೊಮ್ಮೇರಹಳ್ಳಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ತೆಯ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಜಾನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ, ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಗುಣವಂತ ಗ್ರಂಥ ಸಂಪಾದಕ ಡಾ.ಬೋರೇಗೌಡ ಚಿಕ್ಕಮರಳಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಾಡಾ ಮಾಜಿ ಅಧ್ಯಕ್ಷ ಎನ್.ಶಿವಲಿಂಗಯ್ಯ, ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ಬಿ.ನರಸಿಂಹೇಗೌಡ, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಎಂ.ಶ್ರೀಕಾಂತ್, ಎಸ್.ವಾಸುದೇವ್, ಸುಶೀಲಮ್ಮ ಮರಿದೇವೇಗೌಡ, ಸಿ.ಎಂ.ಶ್ರೀನಾಥ್, ಸುಷ್ಮಾ, ಡಾ.ಸಿ.ಎಂ.ಶ್ರೀಧರ್, ಡಾ.ಎಂ.ಕೆ.ಶಿಲ್ಪಶ್ರೀ, ಸಿ.ಎಂ.ಪೂರ್ಣಿಮಾ ಹಾಗೂ ದಿವಂಗತ ಚಿಕ್ಕಾಡೆ ಮರಿದೇವೇಗೌಡರ ನೂರಾರು ಗೆಳೆಯರು, ಬಂಧುಗಳು, ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೊಡ್ಡ ವ್ಯಕ್ತಿತ್ವ ಹೊಂದಿದ್ದರು
ಮರಿದೇವೇಗೌಡರು ದೊಡ್ಡ ವ್ಯಕ್ತಿತ್ವ ಹೊಂದಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಹಲವಾರು ಕಾರ್ಯಕ್ರಮಗಳ ಒತ್ತಡದ ನಡುವೆಯೂ ಶ್ರೀ ನಿರ್ಮಲಾನಂದನಾಘ ಶ್ರೀಗಳು ಆಗಮಿಸಿರುವುದು ಕೇವಲ ಮರಿದೇವೇಗೌಡರ ಮೇಲಿನ ಪ್ರೀತಿಯಿಂದ. ತಾವು ಕೆಲಸ ಮಾಡಿದ ಎಲ್ಲ ಕ್ಷೇತ್ರಗಳಲ್ಲೂ ಮರಿದೇವೇಗೌಡರು ಪ್ರಾಮಾಣಿಕತೆ ತೋರಿದ್ದಾರೆ.  
-ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು