ಆರೋಗ್ಯದ ಬಗ್ಗೆ ವಾಟ್ಸಾಪ್ ಮಾಹಿತಿಯನ್ನು ನಂಬಬೇಡಿ : ಡಾ.ಎನ್.ಕೃಷ್ಣ

ರಸ್ತೆ ನಿಯಮಗಳ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಆರ್.ವಿವೇಕಾನಂದರಿಂದ ಉಪನ್ಯಾಸ 


ಪಾಂಡವಪುರ : ವೈದ್ಯರ ಸಲಹೆ ಪಡೆಯದೇ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬಾರದು. ಅದರಲ್ಲೂ ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಬರುವ ವೈದ್ಯಕೀಯ ಸಲಹೆಗಳನ್ನು ಪರಿಶೀಲಿಸದೇ ಪಾಲಿಸಬಾರದು ಎಂದು ಖ್ಯಾತ ಸಕ್ಕರೆ ಕಾಯಿಲೆ ಮತ್ತು ಹೃದ್ರೋಗ ತಜ್ಞ ಡಾ.ಎನ್.ಕೃಷ್ಣ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತೇಜಸ್ವಿ ಅಭಿಮಾನಿ ಬಳಗದಿಂದ ಬುಧವಾರ ಸಂಜೆ ಪಟ್ಟಣದ ಕಸಾಪ ಭವನದಲ್ಲಿ ಏರ್ಪಡಿಸಿದ್ದ ದೈನಂದಿನ ಜೀವನದಲ್ಲಿ ಸ್ವಾಸ್ಥ್ಯ ಸಂರ್ಧನೆ ಕುರಿತ  ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ನಿಯಮಿತ ಆಹಾರ ಸೇವನೆ, ವ್ಯಾಯಾಮ, ಉತ್ತಮ ಆಲೋಚನೆ ಮತ್ತು ಅಭಿರುಚಿಗಳು ಹಾಗೂ ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸಕ್ಕರೆ ಕಾಯಿಲೆ, ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ದೂರವಿರಬಹುದು. ಮನುಷ್ಯನ ಬದುಕಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಆಹಾರ ಸೇವನೆ ಮುಖ್ಯವಾಗಿದೆ. ಕಾರ್ಬೋಹೈಡ್ರೇಟ್, ಕೊಬ್ಬಿನ ಅಂಶಗಳು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಕನಿಷ್ಠ ಒಂದು ಗಂಟೆ ವ್ಯಾಯಾಮ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪಾಂಡವಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಆರ್.ವಿವೇಕಾನಂದ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕಾದ ರಸ್ತೆ ನಿಯಮಗಳ ಬಗ್ಗೆ ಉಪನ್ಯಾಸ ನೀಡಿ,
ವಾಹನ ಚಾಲಕರು ಕಡ್ಡಾಯವಾಗಿ ಡ್ರೆöÊವಿಂಗ್ ಲೈಸೆನ್ಸ್ ಹೊಂದಿರಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸಬೇಕು. ಅಲ್ಲದೇ ತಮ್ಮ ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ವಾಹನದೊಂದಿಗೆ ರಸ್ತೆಗೆ ಇಳಿಯುವಾಗ ಬೇರೆಯವರಿತಿಂಗ ತಾವೊಬ್ಬರೇ ಉತ್ತಮ ವಾಹನ ಚಾಲಕರು ಎಂದು ತೀರ್ಮಾನಿಸಿ ರಸ್ತೆಗಿಳಿಯಬೇಕು ಎಂದು ಸಲಹೆ ನಿಡಿದರು.
ಪಟ್ಟಣದಲ್ಲಿ ಕಳೆದ ೨ ತಿಂಗಳಿಂದ ವಾಹನ ಅಪಘಾತದಲ್ಲಿ ಐದು ಜನ ಸತ್ತಿದ್ದಾರೆ. ಅವೆಲ್ಲವೂ ಸ್ವಯಂ ಕೃತ ಅಪರಾಧಗಳು, ಯಾರೊಬ್ಬರ ಬಳಿಯೂ ಡ್ರೆöÊವಿಂಗ್ ಲೈಸೆನ್ಟ್ ಇರಲಿಲ್ಲ ಮತ್ತು ವಾಹನಗಳಿಗೆ ವಿಮೆಯೂ ಮಾಡಿಸಿಲ್ಲ ಇದರಿಂದ ಮೃತರ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಕಾನೂನಿನ ಬಗ್ಗೆ ಪಾಠ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು