ನರಭಕ್ಷಕ ಚಿರತೆ ದಾಳಿಗೆ ಒಂದು ಹಸು ಐದು ಮೇಕೆಗಳು ಬಲಿ

ಕಾಡಂಚಿನ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ವರದಿ-ಶಾರುಕ್ ಖಾನ್, ಹನೂರು 

ಹನೂರು : ಇತ್ತಿಚೆಗೆ ವ್ಯಕ್ತಿಯೊಬ್ಬರನ್ನು ಕೊಂದು ಹಸು ಮತ್ತು ಮೇಕೆಗಳನ್ನು ಹೊತ್ತೊಯ್ದು ಕೊಂದು ಹಾಕಿದ ನರಭಕ್ಷಕ ಚಿರತೆಗೆ ಇಂದು ಒಂದು ಹಸು ಮತ್ತು ಐದು ಮೇಕೆಗಳು ಬಲಿಯಾಗಿರುವ ಘಟನೆ ಮಹದೇಶ್ವರಬೆಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಮಲ್ಲಯ್ಯಪುರ ಗ್ರಾಮದ ಅರಣ್ಯದಲ್ಲಿ ನಡೆದಿದೆ. 
ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮಲ್ಲಯ್ಯಪುರ ಗ್ರಾಮದ ಕುಮಾರ್ ಎಂಬುವವರಿಗೆ ಸೇರಿದ ಐದು ಮೇಕೆಗಳು ಮತ್ತು ಪುದು ನಗರ ಗ್ರಾಮದ ರಾಮಚಂದ್ರ ನಾಯ್ಕ್ ಎಂಬುವವರ ಸುಮಾರು 25 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹಸುವನ್ನು ಚಿರತೆ ಕೊಂದು ಹಾಕಿ ಅವುಗಳ ರಕ್ತ ಕುಡಿದಿರುವ ಬಗ್ಗೆ ವರದಿಯಾಗಿದ್ದು, ಜತೆಗೆ ಹಸುವನ್ನು ಕೊಂದು ಅದರ ಒಂದು ತೊಡೆಯ ಮಾಂಸ ತಿಂದು ಹಾಕಿದೆ. 
ಕಳೆದ ಅದಿನೈದು ದಿನದ ಹಿಂದೆ ಎಲ್ಲೇಮಾಳ ವ್ಯಾಪ್ತಿಯ ಕೆವಿಎನ್ ದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರನ್ನು ಕೊಂದು ತಿಂದಿದ್ದ ಇದೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟು ಅದರ ಚಲನ ವಲನ ಬಗ್ಗೆ ಸಿಸಿ ಕ್ಯಾಮರ ಇಟ್ಟಿದ್ದರು. ಇದು ಏನೂ ಪ್ರಯೋಜನವಾಗಲಿಲ್ಲ. ಅರಣ್ಯ ಸಿಬ್ಬಂದಿಗಳ ಕಣ್ಣಿಗೆ ಬೀಳದ ಚಿರತೆ ಈ ಚಿರತೆ ಆ ಭಾಗದ ಜನರ ಕಣ್ಣಿಗೆ ಬಿದ್ದು ಭಯದ ವಾತವರಣ ಸೃಷ್ಠಿಸಿದೆ.
ಮಲ್ಲಯ್ಯನ ಪುರ ಗ್ರಾಮದ ಕುಮಾರ್ ಸುಮಾರು 80 ಮೇಕೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದಾಗ ಏಕಾಏಕಿ ಚಿರತೆ ಏರು ಧ್ವನಿಯಲ್ಲಿ ಘರ್ಜನೆ ಮಾಡಿ ಮೇಕೆಗಳ ಮೇಲೆ ದಾಳಿ ನಡೆಸಿದೆ. ಇದನ್ನು ಕಂಡ ಕುಮಾರ್ ಭಯದಿಂದ ಕಿರುಚಾಡಿದ ಹಿನ್ನೆಲೆ ಸಿಕ್ಕ ಸಿಕ್ಕ ಮೇಕೆಗಳ ಮೇಲೆರಗಿದ ಚಿರತೆ ಒಂದೆರಡು ಮೇಕೆಗಳ ಕತ್ತು ಹಿಡಿದು ರಕ್ತ ಹೀರಿರುತ್ತದೆ.

ಚಿರತೆಯ ಘರ್ಜನೆಗೆ ಹೆದರಿದ ಮೇಕೆಗಳು ಕಾಡಿನೊಳಗೆ ದಿಕ್ಕಾಪಾಲಾಗಿ ಓಡಿದವು ಎನ್ನಲಾಗಿದೆ.
ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿ ಮೇಕೆಗಳನ್ನು ಹುಡುಕಿಕೊಂಡು ಕಾಡಿನೊಳಗೆ ಹೋದಾಗ ಇನ್ನಷ್ಟು ಮೇಕೆಗಳು ಸತ್ತು ಬಿದ್ದಿದ್ದವು ಎನ್ನಲಾಗಿದೆ. ಇದೇ ಸ್ಥಳದಲ್ಲಿ ಪುದು ನಗರ ಗ್ರಾಮದ ರಾಮಚಂದ್ರನಾಯ್ಕ್ ಎಂಬುವರ ಹಸು ಸಹ ಚಿರತೆಗೆ ಬಲಿಯಾಗಿರುವ ದೃಶ್ಯ ಕಂಡುಬಂತು.
ಅರಣ್ಯ ಅಧಿಕಾರಿಗಳು ಬೇರೆಡೆಯಿಂದ ಚಿರತೆ ತಂದು ನಮ್ಮ ಕಾಡಿಗೆ ಬಿಟ್ಟಿದ್ದಾರೆ. ಇದು ಮನುಷ್ಯರ ಧ್ವನಿ ಕೇಳಿದರೆ ಸಾಕು ಘರ್ಜನೆ ಮಾಡುತ್ತ ಮೇಲೆ ಬೀಳಲು ಬರುತ್ತದೆ. ಮಹದೇಶ್ವರಬೆಟ್ಟ ಮುಖ್ಯರಸ್ತೆಯ ಎರಡು ಬದಿಯಲ್ಲಿ ಈ ಅರಣ್ಯ ಇದ್ದು ವಾಹನ ಸವಾರರನ್ನು ಸಹ ಈ ಚಿರತೆ ಬೆದರಿಸಿದೆ. 

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ತಕ್ಷಣ ಬರುವುದಿಲ್ಲ. ಬಂದರೂ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ನಮ್ಮ ಜೊತೆ ಮೇಕೆ ಹುಡುಕಲು ಸಹ ಕಾಡಿಗೆ ಬರಲಿಲ್ಲ. ಅದರ ಬದಲು ನೀವು ಅರಣ್ಯದೊಳಗೆ ಹೋಗಬೇಡಿ ಹೋದರೆ ತಪ್ಪಾಗುತ್ತದೆ. ಕಾಡಿನೊಳಗೆ ಅನಾಹುತ ಸಂಭವಿಸಿದರೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಭಯ ಹುಟ್ಟಿಸುತ್ತಾರೆ. ಎಂದು ಗ್ರಾಮಸ್ಥರು ಆರೋಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು