ದೀಪಾವಳಿ ಸಂಭ್ರಮಕ್ಕೆ ಸಿಂಗಾರಗೊಂಡ ಮಲೆ ಮಹದೇಶ್ವರಬೆಟ್ಟ 108ಹೆಣ್ಣು ಮಕ್ಕಳಿಂದ ಹಾಲರವಿ ಉತ್ಸವ
ಅಕ್ಟೋಬರ್ 21, 2022
ಕತ್ತಿಪಾವಡ ಸೇವೆ, ಅನ್ನದಾಸೋಹ ಸೇವೆಗೆ ಸಕಲ ಸಿದ್ಧತೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ನಾಳೆ ನಡೆಯಲಿರುವ ದೀಪಾವಳಿ ಜಾತ್ರೆ ಪ್ರಯುಕ್ತ ಮಲೈ ಮಹದೇಶ್ವರಸ್ವಾಮಿ ಬೆಟ್ಟದ ದೇವಾಲಯ ಸಿಂಗಾರಗೊಂಡಿದ್ದು, ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ. ಅ.23 ರಂದು ಶ್ರೀ ಮಲೆ ಮಹದೇಶ್ವರಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ ಉತ್ಸವ ನೆರವೇರಲಿದೆ. ಅ.24ರಂದು ನರಕ ಚತುರ್ಥಿ ದಿನವಾಗಿದ್ದು, ವಿಶೇಷ ಉತ್ಸವಾದಿಗಳು, ಅಮಾವಾಸ್ಯೆ ಸೇವೆ ಮತ್ತು ಉತ್ಸವ ಪೂಜೆ ಸಲ್ಲಿಕೆಯಾಗಲಿದೆ. ಅ.25ರಂದು ಸಾಲೂರು ಬೃಹನ್ಮಠ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಅಮಾವಾಸ್ಯೆ ಪೂಜೆ, ಬೇಡಗಂಪಣ ಸಮುದಾಯದ 108ಹೆಣ್ಣು ಮಕ್ಕಳಿಂದ ಹಾಲರವಿ ಉತ್ಸವ, ಕತ್ತಿಪಾವಡ ಸೇವೆ, ಅನ್ನದಾಸೋಹ ಸೇವೆ ನೆಡೆಯಲಿದೆ.
ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನಲೆ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಕಲ ಸಿದ್ಧತೆ ಕಾರ್ಯಗಳು ಮಹದೇಶ್ವರಬೆಟ್ಟದಲ್ಲಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಜಾತ್ರೆವಿಶೇಷ ಹಾಗೂ ಮಹೋತ್ಸವಗಳು ವಿಭೃಂಜಣೆಯಿಂದ ನಡೆಯದೆ ಸ್ಥಳೀಯ ಸಾಂಪ್ರದಾಯಕ ಆಚರಣೆಯಲ್ಲಿ ಸರಳವಾಗಿ ಜರುಗಿತ್ತು. ಇದರಿಂದ ಲಕ್ಷಾಂತರ ಭಕ್ತರಿಗೆ ನಿರಾಸೆ ಉಂಟಾಗಿತ್ತು. ಈ ಬಾರಿ ಮಹಾಲಯ ಹಾಗೂ ದಸರಾ ಮಹೋತ್ಸವವು ಸಂಭ್ರಮದಿಂದ ಈಗಾಗಲೇ ಅಚರಣೆ ಮಾಡಿದ್ದು ದೀಪಾವಳಿ ಜಾತ್ರೆಗೂ ಸಹ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ತಯಾರಿ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ.
0 ಕಾಮೆಂಟ್‌ಗಳು