ಉದ್ದುನೂರಿನ ರಸ್ತೆ ಉದ್ದಕ್ಕೂ ಹಾಳು

ಎಲೆಲೆಲೆ ರಸ್ತೆ..ಏನಿದವಸ್ತೆ?

 ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನ ಉದ್ದುನೂರು ಗ್ರಾಮದ ಮುಖ್ಯ ರಸ್ತೆ ಉದ್ದಕ್ಕೂ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಹರಸಾಹಸದಿಂದ ಇಲ್ಲಿ ಸಂಚಾರ ಮಾಡಬೇಕಿದೆ. 
ಹನೂರು ಪಟ್ಟಣದಿಂದ ಉದ್ದುನೂರು ಗ್ರಾಮಕ್ಕೆ ತೆರಳುವ ಈ ರಸ್ತೆಯು ತೀರ ಹದಗೆಟ್ಟಿದ್ದು, ರಸ್ತೆ ಸಂಪೂರ್ಣ ಗುಂಡಿಗಳಿಂದ ಆವೃತ್ತಗೊಂಡಿದೆ,
ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಲೋಕ್ಕನಹಳ್ಳಿ ಮಾರ್ಗದ ಹನೂರು ಹತ್ತಿರ ಬರುವ ತಟ್ಟೆಹಳ್ಳ ಕೂಡ ತುಂಬಿ ಹರಿಯುತ್ತಿದ್ದೂ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈಗ  ಉದ್ದನೂರು ಮಾರ್ಗದಲ್ಲೇ ಸಂಚರಿಸುತ್ತಿರುವ ಕಾರಣ ಮೊದಲೇ ಗುಂಡಿ ಬಿದ್ದಿದ್ದ ಈ ರಸ್ತೆ ಈಗ ಸಂಪೂರ್ಣ ಹಳ್ಳ ಹಿಡಿದಿದೆ. 
ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ಹೋಗುವ ಮಕ್ಕಳಿಳೆ ತೀವ್ರ ಅನಾನುಕೂಲವಾಗಿದೆ.  ಕ್ಷೇತ್ರದ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಗಳೇ ನಮ್ಮ ಕ್ಷೇತ್ರದ ಅಭಿವೃದ್ಧಿ ತೋರುತ್ತಿವೆ
ಹಲವಾರು ವರ್ಷಗಳಿಂದಲ್ಲೂ ನಮ್ಮ ಗ್ರಾಮದ ರಸ್ತೆ ಹದಗೆಟ್ಟಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಗಮನಹರಿಸುತ್ತಿಲ್ಲ. ಈ ಮಳೆಗಾಲದಲ್ಲಿ ರಸ್ತೆ ತುಂಬಾ ನೀರು ನಿಂತಿತ್ತು. ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೆ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ರಸ್ತೆಗಳೇ ನಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತಿವೆ. ಇನ್ನಾದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚತ್ತುಕೊಂಡು  ರಸ್ತೆ ದುರಸ್ತಿ ಮಾಡಬೇಕಿದೆ.
-ಬೋರೆವೆಲ್ ಬಸವಣ್ಣ, ಉದ್ದುನೂರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು