ಎಲ್ಲೆಮಾಳದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ವೆಂಕಟೇಶ್ ತೋಟದಲ್ಲಿ ಓಡಾಟ

ವರದಿ ಶಾರುಕ್ ಖಾನ್ ಹನೂರು 

ಹನೂರು : ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಕೊಂದು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಚಿರತೆ ತಾಲ್ಲೂಕಿನ ಎಲ್ಲೇಮಾಳದಲ್ಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಿದೆ.
ರಾತ್ರಿ ವೇಳೆ ವೆಂಕಟೇಶ್ ಅವರ ತೋಟದಲ್ಲಿ ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಾಣಿಸಿ ಕೊಂಡಿದೆ. ಇದರಿಂದ ಎಲ್ಲೇಮಾಳ ಗ್ರಾಮಸ್ಥರಲ್ಲಿ ಭಯ ಮೂಡಿದೆ.  
ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಅಲ್ಲಲ್ಲಿ ಬೋನುಗಳನ್ನು ಇಟ್ಟಿದ್ದು, ಸಿಸಿ ಕ್ಯಾಮೆರಾ ಕೂಡಾ ಅಳವಡಿಸಿದ್ದರು. ಆದರೆ, ಅರಣಾಧಿಕಾರಿಗಳ ಕ್ಯಾಮೆರಾ ಕಣ್ಣಿಗೆ ಬೀಳದೆ. ಹೆಜ್ಜೆಯನ್ನು ಉಳಿಸಿ ಹೋಗಿದೆ. 
ಇತ್ತೀಚೆಗೆ ಗೋವಿಂದಯ್ಯ ಎಂಬ ವೃದ್ಧನನ್ನು ಕೊಂದಿರುವ ಈ ಚಿರತೆ ಜಾನುವಾರುಗಳ ಮೇಲೂ ದಾಳಿ ನಡೆಸಿ ಕೊಂದು ಹಾಕಿತ್ತು. ಹಲವಾರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿರುವ ಈ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿಸುತ್ತಲೇ ಇದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು