ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಹಾನಿ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಕುರುಬರದೂಡ್ಡಿ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಜೊತೆಗೆ ಉಡುತೊರೆ ಹಳ್ಳ ಜಲಾಶಯದಿಂದ ನೀರು ಯತ್ತೆಚ್ಚವಾಗಿ ಹರಿದ ಪರಿಣಾಮ ಕುರುಬರದೂಡ್ಡಿ ಗ್ರಾಮದ ಕೆರೆ ಭರ್ತಿಯಾಗಿ ಗ್ರಾಮದ ಪ್ರಮುಖ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿದ್ರೆ ಮಂಪರಿನಲ್ಲಿದ್ದ ಜನರು ಮನೆಗಳಿಗೆ ನುಗ್ಗಿದ ನೀರಿನಿಂದ ರಾತ್ರಿ ಪೂರ ನೀರನ್ನು ಹೂರ ಹಾಕುವ ಜೊತೆ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಗ್ರಾಮದಲ್ಲಿ ಸೂಕ್ತ ಚರಂಡಿಗಳು ಇಲ್ಲದ ಕಾರಣ ಮಳೆನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
0 ಕಾಮೆಂಟ್‌ಗಳು