ವಿದ್ಯುತ್ ಸ್ಪರ್ಷಿಸಿ ಇಬ್ಬರು ಛಾಯಾಗ್ರಾಹಕರ ದುರ್ಮರಣ

ಸ್ಟುಡಿಯೋ ಬ್ಯಾನರ್ ಕಟ್ಟಲು ಹೋಗಿ ದುರ್ಘಟನೆ

 ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲೂಕಿನ ಬೇಸಗರಹಳ್ಳಿ ಗ್ರಾಮದಲ್ಲಿ ಸ್ಟುಡಿಯೋ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಪ್ರವಹಿಸಿ ಇಬ್ಬರು ಯುವ ಛಾಯಾಗ್ರಾಹಕರು  ಸಾವಿನಪ್ಪಿದ್ದಾರೆ. 
ಬೆಸಗರಹಳ್ಳಿಯಲ್ಲಿ ಮರಳಿಗ ಗ್ರಾಮದ ಲಕ್ಷ್ಮಿ ಸ್ಟುಡಿಯೋ ಮಾಲೀಕರಾದ ವಿವೇಕ್ (42) ಹಾಗೂ ಗೆಜ್ಜಲಗೆರೆ ಗ್ರಾಮದ ವಿಡಿಯೋಗ್ರಾಫರ್ ಮಧು ( 35) ಮೃತ ದುರ್ದೈವಿಗಳು ..
ಬೆಸಗರಹಳ್ಳಿಯಲ್ಲಿ  ತಮ್ಮ ಸ್ಟುಡಿಯೋ ಮೇಲೆ ಬ್ಯಾನರ್ ಕಟ್ಟುವ ವೇಳೆಯಲ್ಲಿ ವಿದ್ಯುತ್ ಸ್ಪರ್ಶವಾಗಿ ಅಸ್ವಸ್ಥರಾದ ಇಬ್ಬರನ್ನು ಕೂಡಲೇ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಛಾಯಾಗ್ರಾಹಕರು ಸಾವನ್ನಪ್ಪಿದ್ದಾರೆ. ಇವರಿಬ್ಬರ ದುರ್ಮರಣಕ್ಕೆ ಕುಟುಂಬಸ್ತರ ಅಕ್ರಂದನ ಮುಗಿಲು ಮುಟ್ಟಿದೆ. ಛಾಯಾಗ್ರಾಹಕ ಬಳಗವು ಕಂಬನಿ ಮಿಡಿದಿದ್ದಾರೆ
ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು