ಮನ್ ಮುಲ್ ನಿಂದ ಹೈನುಗಾರರಿಗೆ ದೀಪಾವಳಿ ಗಿಫ್ಟ್

ಹಾಲು ಖರೀದಿ ದರದಲ್ಲಿ ಒಂದು ರೂ ಹೆಚ್ಚಳ

 ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನ್ ಮುಲ್ ನಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಹಾಲಿನ ದರದಲ್ಲಿ ರೈತರಿಗೆ 1 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಾಸರಿ 9.84 ಲಕ್ಷ ಲೀಟರ್ ಹಾಲನ್ನು ಶೇಖರಿಸಲಾಗುತ್ತಿದೆ. ಪ್ರಸ್ತುತ ಮಳೆಯಿಂದಾಗಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಶೇಖರಣಾ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗೂ ಇತ್ತಿಚಿನ ದಿನಗಳಲ್ಲಿ ರೈತರಿಗೆ ಹಸಿರು ಮೇವಿನ ಕೊರತೆ ಹಾಲು ಉತ್ಪಾದನಾ ವೆಚ್ಚ ಕೂಡ ಅಧಿಕವಾಗಿದೆ. 
ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹಾಗೂ ಉತ್ತಮ ಮಾರಾಟದಿಂದ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಿದ್ದು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂಬ ದೃಷ್ಟಿಯಿಂದ ದಿನಾಂಕ: 21-10-2022 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ಖರೀದಿ ದರವನ್ನು 01-11-2022 ರಿಂದ 31-03-2023 ರವರೆಗೆ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1 ರೂ ಗಳನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು