ಪಿಡಿಓ ಗಜದಂಡಯ್ಯ ಸ್ವಾಮಿ ಬರ್ಬರ ಹತ್ಯೆ

 ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ದೇವರಭೂಪೂರ ಗ್ರಾಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು(ಪಿಡಿಒ) ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಲಿಂಗಸೂಗೂರು ಪಟ್ಟಣದ ಹೊರವಲಯದಲ್ಲಿ ಕೋಠ ಗ್ರಾಮ ಪಂಚಾಯತ್‍ನ 51 ವರ್ಷದ ಪಿಡಿಒ ಗಜದಂಡಯ್ಯ ಸ್ವಾಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆಲವರು ಕಲ್ಲುಗಳಿಂದ ಹೊಡೆದು ಸಹ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಗ್ರಾಮದ ಹೊರ ವಲಯದಲ್ಲಿರುವ ಸೀಮಿ ವೀರಣ್ಣ ದೇವಸ್ಥಾನಕ್ಕೆ ಗುರುವಾರ ಬೆಳಗ್ಗೆ ಪೂಜೆಗೆಂದು ಗಜದಂಡಯ್ಯ ತೆರಳಿದ್ದಾರೆ. ಈ ವೇಳೆ, ದುಷ್ಕರ್ಮಿಗಳು ಗಜದಂಡಯ್ಯ ಅವರ ಬೈಕ್ ಅಡ್ಡಗಟ್ಟಿ ವಿಜಯದಶಮಿ ಬನ್ನಿ ಮರದ ಎಲೆಗಳ ವಿನಿಮಯ ಮತ್ತು ಪ್ರಸಾದ ಸ್ವೀಕರಿಸಲು ಹೇಳಿದರು.

ಗಜದಂಡಯ್ಯ ಸ್ವಾಮಿ ತಾವು ಧರಿಸಿದ್ದ ಹೆಲ್ಮೆಟ್ ತೆಗೆದು, ಚಪ್ಪಲಿ ಬಿಟ್ಟು ಪ್ರಸಾದ ಸ್ವೀಕರಿಸಲು ಮುಂದಾಗುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ರಗಳಿಂದ ಗಜದಂಡಯ್ಯ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಕಾರಣವೇನೆಂದು ನಿಖರವಾದ ಮಾಹಿತಿ ಬಂದಿಲ್ಲ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು