ಮೈಸೂರು ಮೇಲ್.ಕಾಂ ವರದಿ ಫಲಶ್ರುತಿ
ಮೈಸೂರು ಮೇಲ್.ಕಾಂ ವರದಿ ಫಲಶ್ರುತಿ
ವರದಿ-ಶಾರುಕ್, ಖಾನ್ ಹನೂರು
ಹನೂರು : ತಾಲ್ಲೂಕಿನ ಕೌದಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಬಗ್ಗೆ ಮೈಸೂರು ಮೇಲ್.ಕಾಂ ಪ್ರಕಟಿಸಿದ್ದ ವರದಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ತಕ್ಷಣ ಸ್ಪಂದಿಸಿ ನಲ್ಲಿ ಪೈಪ್ ದುರಸ್ತಿಗೆ ಮುಂದಾಗಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.
ಪೈಪ್ ಒಡೆದು ಕುಡಿಯುವ ನೀರು ರಸ್ತೆಯಲ್ಲಿ ಹರಿಯುತ್ತಿರುವ ಕಾರಣ ಗುಂಡಿಬಿದ್ದು ರಸ್ತೆಯಲ್ಲಾ ಕೆಸರುಮಯವಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಮತ್ತು ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಮೈಸೂರು ಮೇಲ್.ಕಾಂ ಈ ಬಗ್ಗೆ ವಿಸ್ತøತ ವರದಿ ಪ್ರಕಟಿಸಿ ಪಿಡಿಓ ಮರಿಸ್ವಾಮಿ ಅವರ ಗಮನ ಸೆಳೆದಿತ್ತು.
ನೀರು ನಿಂತಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುವ ಭೀತಿ ಇರುವ ಕಾರಣ ಕೂಡಲೇ ನೀರು ನಿಲ್ಲಿಸಿ ಇಲ್ಲವೇ ಪೈಪ್ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರ ಮೇರೆಗೆ ಶುಕ್ರವಾರ ಬೆಳಿಗ್ಗೆ ಪಂಚಾಯ್ತಿ ನೌಕರರು ಪೈಪ್ ರಿಪೇರಿಗೆ ಮುಂದಾಗಿದ್ದಾರೆ.
0 ಕಾಮೆಂಟ್‌ಗಳು