ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಆಯೋಜನೆ
ಮೈಸೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಇದೇ ಅಕ್ಟೋಬರ್ ಒಂಭತ್ತರಂದು ನಗರದ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸಮರ್ಥ ಶೀರ್ಷಿಕೆಯ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪರಿಷತ್‍ನ ನಗರ ಘಟಕದ ಅಧ್ಯಕ್ಷರಾದ ಮ.ಗು. ಸದಾನಂದಯ್ಯ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ. ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸುವರು, ಪ್ರೊ. ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು, ಧಾರಿಣಿ ಸವಿ ಸಂಚಿಕೆಯನ್ನು ಡಾ. ಗೊ.ರು. ಚನ್ನಬಸಪ್ಪ ಬಿಡುಗಡೆಗೊಳಿಸುವರು, ಸುಶೀಲಾ ಸೋಮಶೇಖರ್ ಉಪಸ್ಥಿತರಿರುವರು ಎಂದರು.
ಮಧ್ಯಾಹ್ನ 12ಕ್ಕೆ ಆಧುನಿಕ ಜೀವನ ಪ್ರವಾಹ- ಮಹಿಳೆ ವಿಷಯ ಕುರಿತ ಚಿಂತನಗೋಷ್ಠಿ ನಡೆಯಲಿದೆ. ಡಾ. ವಿಜಯಕುಮಾರಿ ಎಸ್. ಕರಿಕಲ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ, ಕಾಯಕ ಜೀವಿಗಳು ಮತ್ತು ಮಹಿಳೆಯರು ವಿಷಯ ಕುರಿತು ಡಾ.ಸಿ. ವೀರಣ್ಣ ಉಪನ್ಯಾಸ ನೀಡಲಿದ್ದಾರೆ. ಸಂಜೆ ನಾಲ್ಕಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ ಆರಕ್ಕೆ ಡಾ. ವಸುಂಧರಾ ದೊರೆಸ್ವಾಮಿ ಅವರ ಶಿಷ್ಯರಾದ ಸುಜಯ್ ಶಾನುಭಾಗ್ ಮತ್ತು ಕಲಾ ಸುಜಯ ತಂಡದಿಂದ ಅನುಭಾವದೊಳು ವಚನ ನೃತ್ಯ ರೂಪಕ ನಡೆಯಲಿದೆ ಎಂದು ತಿಳಿಸಿದರು.
0 ಕಾಮೆಂಟ್‌ಗಳು