ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೂಮಿಪೊಜೆ

ಶುದ್ದ ಕುಡಿಯುವ ನೀರಿನ ಘಟಕ, ಡಿಜಿಟಲ್ ಲೈಬ್ರರಿ, ಅಂಗನವಾಡಿ ಕಟ್ಟಡ ಲೋಕಾರ್ಪಣೆ

ವರದಿ-ನಜೀರ್ ಅಹಮದ್

ಪಾಂಡವಪುರ : ತಾಲೂಕಿನ ವಿವಿಧ ಗ್ರಾಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ರಸ್ತೆಗಳು, ಶುದ್ದ ಕುಡಿಯುವ ನೀರಿನ ಘಟಕಗಳು, ಕಸ ವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಪಟ್ಟಣದಲ್ಲಿ ಫ್ರೆಂಚ್ಸ್‍ರಾಕ್ಸ್ ಶತಮಾನ ಶಾಲೆಯನ್ನು 16 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ, ಚಂದ್ರೆ ಗ್ರಾಮದಲ್ಲಿ 5 ಕೋಟಿ ವೆಚ್ಚದಲ್ಲಿ ಪಾಂಡವಪುರದಿಂದ ಚಂದ್ರೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ದಿ, ಟಿ.ಎಸ್.ಛತ್ರ ಗ್ರಾಮದ ಹೊರ ವಲಯದಲ್ಲಿ ಕಸ ವಿಲೇವಾರಿ ಘಟಕ ಹಾಗೂ ಟಿ.ಎಸ್.ಛತ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದರು. 

ನಾರಾಯಣಪುರ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ  ನೀಡಿ, ಜವರೇಗೌಡನಕೊಪ್ಪಲು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು. 
ಬಳಿಕ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ದಿ, ಕಲವಿಲೇವಾರಿ, ಡಿಜಿಟಲ್ ಲೈಬ್ರರಿಗೆ ಉದ್ಘಾಟನೆ, ಅಂಗನವಾಡಿ ಕಟ್ಟಡಕ್ಕೆ ಚಾಲನೆ, ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೆ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ತಾಲೂಕಿನ ಸರ್ವತೋಮುಖವಾದ ಅಭಿವೃದ್ದಿಗೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಪಟ್ಟಣದ ಫ್ರೆಂಚ್‍ರಾಕ್ಸ್ ಶತಮಾನೋತ್ಸವ ಶಾಲೆಯನ್ನು ನವೀಕರಣಗೊಳಿಸಿ ಶಾಲೆಯನ್ನು ಉಳಿಸಲು 16 ಲಕ್ಷ ಅನುದಾನ ಬಿಡುಗಡೆ ಮಾಡಿಕೊಡಲಾಗಿದೆ, ಅಧಿಕಾರಿಗಳು ಗುಣಮಟ್ಟದಿಂದ ಶಾಲೆ ನವೀಕರಣಗೊಳಿಸಬೇಕು ಎಂದು ಸೂಚನೆ ನೀಡಿದರು. 

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಟಿ.ಎಸ್.ಛತ್ರಗ್ರಾಪಂ ಅಧ್ಯಕ್ಷೆ ಪೂಜಾ ದಿನೇಶ್, ನಾರಾಯಣಪುರ ಗ್ರಾಪಂ ಅಧ್ಯಕ್ಷೆ ಪವಿತ್ರ ಲೋಕೇಶ್, ಉಪಾಧ್ಯಕ್ಷೆ ಮಂಗಳ ಪ್ರಕಾಶ್, ಮುಖಂಡರಾದ ಕಡಬ ಬಲರಾಮು, ಸಿ.ಎ.ಲೋಕೇಶ್, ಫ್ರೆಂಚ್‍ರಾಕ್ಸ್ ಶತಮಾನೋತ್ಸವ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಾಕೇಗೌಡ, ಉಪಾಧ್ಯಕ್ಷ ರಮ್ಯಾ, ಎಂಜಿನಿಯರ್‍ಗಳಾದ ಎಇಇ ಆದರ್ಶ, ಮಹದೇವಸ್ವಾಮಿ, ಎಇಗಳಾದ ಕುಮಾರ್, ಬಾಲರಾಜ್ ಸೇರಿದಂತೆ ಹಲವರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು