165 ಗ್ರಾಂ ಗಾಂಜಾ ವಶ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಕೌದಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ಓರ್ವನನ್ನು ರಾಮಾಪುರ ಪೋಲಿಸರು ಬಂಧಿಸಿದ್ದಾರೆ.
ಕೌದಳ್ಳಿ ಗ್ರಾಮದ ವೆಂಕಟರಾಜು ಬಂಧಿತ ಆರೋಪಿ.
ಈತ ಕೌದಳ್ಳಿ ಗ್ರಾಮದಿಂದ ಹನೂರಿನ ಕಡೆ ಅಕ್ರಮವಾಗಿ ಸುಮಾರು 165 ಗ್ರಾಂ ಗಾಂಜಾ ಸಾಗಣೆ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಹಿಡಿದು ಗಾಂಜಾ ವಶಕ್ಕೆ ಪಡೆದಿದ್ದಾರೆ.
ಕಾರ್ಯಚರಣೆಯಲ್ಲಿ ಪೊಲೀಸರಾದ ಶಿವಕುಮಾರ್, ಮಹೇಂದ್ರ, ನಾಗೇಂದ್ರ ಇದ್ದರು.
0 ಕಾಮೆಂಟ್‌ಗಳು