ಭಾರಿ ಮಳೆ : ಕೋಳಿ ಫಾರಂಗೆ ನುಗ್ಗಿದ ನೀರು, 6500 ಕೋಳಿಗಳ ಸಾವು
ಅಕ್ಟೋಬರ್ 15, 2022
ಪಾಂಡವಪುರ ತಾಲ್ಲೂಕು ಚಂದ್ರೆ ಗ್ರಾಮದಲ್ಲಿ ಘಟನೆ : 5 ಲಕ್ಷ ನಷ್ಟ
ವರದಿ : ಎನ್.ಕೃಷ್ಣೇಗೌಡ, ಪಾಂಡವಪುರ
ಪಾಂಡವಪುರ : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯ ನೀರು ಕೋಳಿ ಫಾರಂಗೆ ನುಗ್ಗಿದ ಪರಿಣಾಮ 5 ಲಕ್ಷ ರೂ ಮೌಲ್ಯದ 6500 ಕೋಳಿಗಳು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕು ಚಂದ್ರೆ ಗ್ರಾಮದಲ್ಲಿ ನಡೆದಿದೆ. ಚಂದ್ರೆ ಸ್ವಾಮಿಗೌಡ ಎಂಬವರಿಗೆ ಸೇರಿದ ಈ ಕೋಳಿ ಫಾರಂನಲ್ಲಿ ಅನಾಹುತ ನಡೆದಿದ್ದು, 15 ದಿನದ ಬೆಳವಣಿಗೆಯ 6.5 ಸಾವಿರ ಕೋಳಿ ಮರಿಗಳು ಸಾವನ್ನಪ್ಪಿವೆ. ಕೆರೆತೊಣ್ಣೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿ ವಿದ್ಯಾಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಘಟನೆಯ ಬಗ್ಗೆ ಸ್ವಾಮೀಗೌಡ ಮಾತನಾಡಿ. ತಾವು ಬಡ ರೈತನಾಗಿದ್ದು, ಕೋಳಿ ಫಾರಂನಿಂದ ಜೀವನ ಸಾಗಿಸುತ್ತಿದ್ದು, ಇದೀಗ ಕೋಳಿ ಮರಿಗಳು ಸಾವನ್ನಪ್ಪಿ 5ಲಕ್ಷ ರೂ. ನಷ್ಟ ಸಂಭವಿಸಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
0 ಕಾಮೆಂಟ್‌ಗಳು