ಹನೂರು : ಚುನಾವಣಾ ಪೂರ್ವ ತನ್ನ ಕ್ಷೇತ್ರ ವ್ಯಾಪ್ತಿಯ ಕೌದಳ್ಳಿ ಗ್ರಾಮ ದೇವತೆ ದಂಡಿನ ಮಾರಮ್ಮ ದೇವಾಲಯದ ಜಿರ್ಣೋದ್ಧಾರ ಮಾಡುವುದಾಗಿ ಹರಕೆ ಹೊತ್ತಿದ್ದ ಶಾಸಕ ಆರ್.ನರೇಂದ್ರ ಶನಿವಾರ ದೇವಾಲಯದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮಸ್ಥರಿಗೆ ದೇವಾಲಯ ಒಪ್ಪಿಸಿ ಹರಕೆ ತೀರಿಸಿದರು. ಇನ್ನೂರು ವರ್ಷ ಹಳೆಯದಾದ ದಂಡಿನ ಮಾರಮ್ಮ ದೇವಿ ಈ ಭಾಗದ ಜನರ ಆರಾಧ್ಯ ದೇವಿ. ಕೆಲ ವರ್ಷಗಳ ಹಿಂದೆ ಗ್ರಾಮದ ಮದ್ಯಭಾಗಕ್ಕೆ ದೇವಾಲಯ ಸ್ಥಳಾಂತರಿಸಲಾಗಿತ್ತು. ಮೂಲ ವಿಗ್ರಹದ ಸ್ಥಳದಲ್ಲಿಯೇ ಶಾಸಕರು ದೇವಾಲಯ ನಿರ್ಮಿಸಲಾಗಿದೆ. ಶಾಸಕ ಆರ್.ನರೇಂದ್ರ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ ಮತ್ತು ತಡೆಗೊಡೆಗಳ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅವದಿಯಲ್ಲಿ ಮಾಡಿದ್ದೇನೆ. ದೇವರ ಆರ್ಶಿವಾದವಿದ್ದರೆ ಮುಂದೆಯೂ ಮಾಡುತ್ತೇನೆ ಎಂದರು. ಉದ್ಯಮಿ ರಂಗಸ್ವಾಮಿ ಮಾತನಾಡಿ, ಶಾಸಕರು ಎಲ್ಲಾ ಜನಾಂಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಮುಂದೆಯೂ ಇವರೇ ಶಾಸಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ನಾವೆಲ್ಲರೂ ಒಗ್ಗಾಟ್ಟಾಗಿ ಶ್ರಮಿಸೋಣ ಎಂದರು ಕೌದಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜುಸ್ವಾಮಿ, ಸದಸ್ಯರುಗಳಾದ ಪ್ರವೀಣ್, ಶಿವಕುಮಾರ್, ರಾಚಯ್ಯ ಮುಖಂಡರುಗಳಾದ ಬಸವರಾಜು, ಚಿಕ್ಕ ತಮ್ಮೆಗೌಡ, ನಟರಾಜು, ವೆಂಕಟರಮರಣ ನಾಯ್ಡು, ಗೋವಿಂದು, ಮಲ್ಲಯನಪುರ ಗೋವಿಂದು, ಶ್ರೀರಂಗಶೆಟ್ಟರು, ಮಂಜು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು