ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆ : ಆಂಬುಲೆನ್ಸ್‍ನಲ್ಲಿಯೇ ಹೆರಿಗೆ

ಕಾಡಂಚಿನ ಗ್ರಾಮ ಚೆಂಗಡಿಯಲ್ಲಿ ಘಟನೆ

ವರದಿ-ಶಾರುಕ್ ಖಾನ್, ಹನೂರು

ಹನೂರು : ಹೆರಿಗೆಗಾಗಿ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ  ಹೋಗುತ್ತಿದ್ದ ವೇಳೆ 108 ಆಂಬುಲೆನ್ಸ್‍ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಕಾಡಂಚಿನ ಗ್ರಾಮ ಚೆಂಗಡಿಯ ಬಳಿ ಜರುಗಿದೆ.
ಚಂಗಡಿ ಗ್ರಾಮದ ವೆಂಕಟರಾಜು ರವರ ಪತ್ನಿ ವಿಶಾಲಾಕ್ಷಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕುಟುಂಬಸ್ಥರು ಈಕೆಯನ್ನು ಆಂಬುಲೆನ್ಸ್ ಮೂಲಕ ಕೌದಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕಳಿಸಿದ  ಸಂದರ್ಭದಲ್ಲಿ ಮಾರ್ಗ ಮಧ್ಯೆ ಗರ್ಬಿಣಿಗೆ ಹೊಟ್ಟೆ ನೋವು ಹೆಚ್ಚಾಗಿ ಆಂಬುಲೆನ್ಸ್‍ನಲ್ಲಿಯೇ ಹೆರಿಗೆ ಆಯಿತು.
 ಹೆರಿಗೆಗೆ ತುರ್ತು ವೈದ್ಯಕೀಯ ಸಿಬ್ಬಂದಿ ನಾಗರಾಜು ಚಾಲಕ ಮಲ್ಲೇಶ್ ಅವರ ಸಹಕಾರ ಪಡೆದು ಯಶಸ್ವಿಯಾಗಿ ಹೆರಿಗೆ ಮಾಡಿಸಿ ನಂತರ ತಾಯಿ ಮಗುವನ್ನು ಕೌದಳ್ಳಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಈಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಂಬ್ಯುಲೆನ್ಸ್ ತುರ್ತು ವಾಹನದ ಸಿಬ್ಬಂದಿ ನಾಗರಾಜು  ತಿಳಿಸಿದರು.