ಹನೂರು ಬಳಿ ಹುಲಿರಾಯನ ದರ್ಶನ : ಬೆಚ್ಚಿಬಿದ್ದ ವಾಹನ ಸವಾರರು
ಅಕ್ಟೋಬರ್ 30, 2022
ಹೋದೆಯಾ ಚಿರತೆರಾಯ ಅಂದ್ರೇ, ಬಂದೇ ಬಿಟ್ಟಾ ಹುಲಿಮಾಮ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲೂಕಿನ ಲೊಕನಹಳ್ಳಿ ಹೋಬಳಿ ಕೇಂದ್ರ ಸ್ಥಾನದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಮೀಪವಿರುವ ಹೊಸದೊಡ್ಡಿ ಗ್ರಾಮದ ಬಳಿ ಇಂದು ರಾತ್ರಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ. ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಭಾರಿ ಗಾತ್ರದ ಹುಲಿ ರಸ್ತೆಯನ್ನು ದಾಟುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಗೆಳೆಯರೊಂದಿಗೆ ಹಂಚಿಕೊಂಡಿದ್ದು, ದೃಶ್ಯವನ್ನು ನೋಡಿದ ಈ ಭಾಗದ ಜನರು ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನರಭಕ್ಷಕ ಚಿರತೆಯೊಂದು ದನಗಾಹಿ ವ್ಯಕ್ತಿಯೊಬ್ಬರನ್ನು ಕೊಂದಿತ್ತು. ಜತೆಗೆ ಅನೇಕ ಜಾನುವಾರುಗಳ ಮೇಲೆ ದಾಳಿ ನಡೆಸಿ ಅವುಗಳ ರಕ್ತವನ್ನು ಹೀರಿ ಕೊಂದುಹಾಕಿತ್ತು. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದರು. ಅದೃಷ್ಟವಶಾತ್ ಐದು ದಿನಗಳ ಹಿಂದಷ್ಟೇ ಈ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದು, ಜನ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಈಗ ಹುಲಿರಾಯ ಪ್ರತ್ಯಕ್ಷವಾಗಿ ಮತ್ತೇ ಜನರ ನಿದ್ದೇಗೆಡಿಸಿರುವುದು ಸುಳ್ಳಲ್ಲ.
0 ಕಾಮೆಂಟ್‌ಗಳು