ಟಿಬೆಟ್ ಕ್ಯಾಂಪ್ ನಲ್ಲಿ ಅಪ್ಪು ಸ್ಮರಣೆ, ಕನ್ನಡ ಕಲರವ : ``ಬೊಂಬೆ ಹೇಳುತೈತೆ ಮತ್ತೇ ಹೇಳುತೈತೆ ನೀನೆ ರಾಜಕುಮಾರ’’ ಹಾಡಿಗೆ ಸಭಿಕರ ಮೆಚ್ಚುಗೆ


 ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲೂಕಿನ ಒಡೆಯರ ಪಾಳ್ಯ ಟಿಬೆಟ್ ಕ್ಯಾಂಪ್ ನಲ್ಲಿ ಪುನೀತ್ ರಾಜಕುಮಾರ್ ನಟಿಸಿದ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಅಪ್ಪುವಿನ ಪುಣ್ಯ ಸ್ಮರಣೆ ಮಾಡಲಾಯಿತು.
ಅಪ್ಪು ಅಭಿನಯದ ಚಿತ್ರವೊಂದರ ಜನಪ್ರಿಯ ಗೀತೆಯಾದ `ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ’ ಎಂಬ ಹಾಡನ್ನು ಸುಮಧುರವಾಗಿ ಹಾಡಿದಾಗ ಸಭಿಕರು ಚಪ್ಪಾಳೆ ಹಾಕಿದರು.
ಅಪ್ಪು ಸ್ಮರಣೆ ಪ್ರಯುಕ್ತ ಟಿಬೆಟಿಯನ್ನರು ತಮ್ಮ ಸಾಂಪ್ರದಾಯಿಕ ಉಡುಪಿನ ಜತೆ ಕನ್ನಡ ಬಾವುಟ ಪ್ರತಿಬಿಂಬಿಸುವ ಕೆಂಪು, ಹಳದಿ ಬಣ್ಣದ ಶಾಲನ್ನು ಹಾಕಿಕೊಂಡು ನಾಡಿನ ನೆಲ, ಜಲ, ನುಡಿ ಹಾಗೂ ನಟನೆಗೆ ಗೌರವ ಸಲ್ಲಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು