ನಂಜನಗೂಡು : ಹೆಡತಲೆ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ವಾಲ್ಮೀಕಿ ಜಯಂತಿ
ಅಕ್ಟೋಬರ್ 30, 2022
ವರದಿ-ಹೆಚ್.ಎಸ್.ಚಂದ್ರ, ನಂಜನಗೂಡು
ನಂಜನಗೂಡು : ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಭಾನುವಾರ ವಾಲ್ಮೀಕಿ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಹಿರಿಯರು, ಮುಖಂಡರು ಮಹರ್ಷಿ ವಾಲ್ಮೀಕಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ರಥಯಾತ್ರೆ ನಡೆದು ಮಹಿಳೆಯರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರ ಮಕ್ಕಳ ಕುಣಿತ ಏರ್ಪಡಿಸಲಾಗಿತ್ತು. ಮಕ್ಕಳು ಮದಕರಿ ನಾಯಕ, ವಾಲ್ಮೀಕಿ ಋಷಿಗಳ ವೇಷ ಭೋಷಗಳನ್ನು ಧರಿಸಿಕೊಂಡು ರಾಜಕಾರಣಿ ಜತೆ ಹೆಜ್ಜೆ ಹಾಕಿ ಕುಣಿದರು. ಗ್ರಾಮದ ಹಿರಿಯ ಮುಖಂಡರು, ಯಜಮಾನರುಗಳು, ರೈತ ಮುಖಂಡರು, ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ಹಾಜರಿದ್ದರು.
0 ಕಾಮೆಂಟ್‌ಗಳು