ಯಾವುದೇ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ : ಯದುವೀರ್

ಕಾಂಗರೂ ಕೇರ್ ಆಸ್ಪತ್ರೆಯಲ್ಲಿ ಸ್ಥನ ಕ್ಯಾನ್ಸರ್ ಜಾಗೃತಿ ಅಭಿಯಾನ 

 ಮೈಸೂರು : ಸಾಮಾನ್ಯವಾಗಿ ಮಹಿಳೆಯರಲ್ಲಿ ಬರುವ ಸ್ಥನ ಕ್ಯಾನ್ಸರ್ ರೋಗ ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್ ರೋಗಗಳ ಬಗ್ಗೆ ಜನಸಾಮಾನ್ಯರು ನಿರ್ಲಕ್ಷ್ಯ ವಹಿಸಬಾರದು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಕಾಂಗರೂ ಕೇರ್ ಮಹಿಳೆ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಸ್ಥನ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ತಪಾಸಣೆ ನಡೆಸಿ ಚಿಕಿತ್ಸೆಗೆ ಒಳಗಾದರೆ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಕಾಂಗರೂ ಆ ಸ್ಪತ್ರೆಯವರು ಸ್ಥನ ಕ್ಯಾನ್ಸರ್ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದು ನಗರದ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು.

ಆಸ್ಪತ್ರೆ ಮುಖ್ಯಸ್ಥ ಡಾ.ಶೇಖರ್ ಸುಬ್ಬಯ್ಯ ಸ್ಥನ ಕ್ಯಾನ್ಸರ್ ಜಾಗೃತಿ ಅಭಿಯಾನ ಕುರಿತು ಮಾತನಾಡಿದರೆ, ಡಾ.ಸುಷ್ಮಾ ಕೃಷ್ಣಮೂರ್ತಿ ಅವರು ಸ್ಥನ ಕ್ಯಾನ್ಸರ್ ಬಗ್ಗೆ ವಿವರಗಳನ್ನು ನೀಡಿದರು.
ಡಾ.ಮಂಜುನಾಥ, ಡಾ.ಬಾಲಾಜಿ, ಕೆ.ಅಕ್ಷತಾ, ಜಿ.ಅರ್ಪಿತಾ ಮುಂತಾದವರು ಇದ್ದರು. 

ನಂತರ ಅವರು ಆಸ್ಪತ್ರೆಯಿಂದ ಹೊರತಂದಿರುವ ವಾರ್ತಾಪತ್ರವನ್ನು ಬಿಡುಗಡೆ ಮಾಡಿದರು. ಬಳಿಕ ಆಸ್ಪತ್ರೆವತಿಯಿಂದ ಯದುವೀರ್ ಅವರನ್ನು ಗೌರವಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು