ಮೈಸೂರಿನಲ್ಲಿ ಅತ್ಯಾಧುನಿಕ `ಮದರ್ ಹುಡ್’ ಮಹಿಳೆ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಉದ್ಘಾಟಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

`ಆಧುನಿಕ ತಂತ್ರಜ್ಞಾನದ ಆಸ್ಪತ್ರೆಗಳು ಮೈಸೂರಿಗೆ ಬರುತ್ತಿರುವುದು ಸಂತಸ ತಂದಿದೆ’ 

ಮೈಸೂರು : ದೊಡ್ಡ ದೊಡ್ಡ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ಆರೋಗ್ಯ ಸೇವೆಗಳು ಮೈಸೂರಿನಂತಹ ಸಣ್ಣ ನಗರಕ್ಕೂ ಬಂದಿರುವುದು ಅತ್ಯಂತ ಸಂತೋಷವಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಯಾದವಗಿರಿ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ `ಮದರ್ ಹುಡ್’ ಮಹಿಳೆ ಮತ್ತು ಮಕ್ಕಳ ಅತ್ಯಾಧುನಿಕ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆಯನ್ನು ವೀಕ್ಷಣೆ ಮಾಡಿದಾಗ ಅಲ್ಟ್ರಾ ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ಆಧುನಿಕ ಯಂತ್ರಗಳು ಬಂದಿವೆ. ಇದರಿಂದ ಈ ಭಾಗದ ಮಹಿಳೆಯರಿಗೆ ಅನುಕೂಲವಾಗಲಿ ಎಂಬುದೇ ನಮ್ಮ ಹಾರೈಕೆ ಎಂದರು.
ಆಸ್ಪತ್ರೆಯ ಮುಖ್ಯಸ್ಥ ವಿಜಯರತ್ನ ವೆಂಕಟರಾಮನ್ ಮಾತನಾಡಿ, ದೇಶಾದ್ಯಂತ ಮದರ್ ಹುಡ್ ಆಸ್ಪತ್ರೆಗಳಿದ್ದು, ಮೈಸೂರಿನಲ್ಲಿ 19ನೇ ಶಾಖೆ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ 7 ಆಸ್ಪತ್ರೆಗಳಿವೆ. ಮಹಿಳೆಯ ಆರೋಗ್ಯ, ಆರೈಕೆ, ಪ್ರೌಢಾವಸ್ಥೆಯಿಂದ ಋತುಬಂಧದವೆರೆಗೆ ನವಜಾತ ಶಿಶುಗಳ ಆರೈಕೆ ಮತ್ತು ಮಕ್ಕಳ ಆರೈಕೆಯ ಸಮಗ್ರ ಸೌಲಭ್ಯವನ್ನು ನಮ್ಮ ಆಸ್ಪತ್ರೆ ಹೊಂದಿದೆ. ಇಲ್ಲಿ ನುರಿತ ಸ್ತ್ರೀರೋಗ ತಜ್ಞರು, ಮಕ್ಕಳು ತಜ್ಞರು, ನಿಒಯೋನ್ಯಾಟೋಲಾಜಿಸ್ಟ್ ಗಳ ತಂಡವೇ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದರು.

ಡಾ.ಮಧುರ ಪಾರ್ಕರ್, ಡಾ.ಅಫ್ಸರ್ ಮುಂತಾದವರು ಮಾತನಾಡಿದರು. ಇದಕ್ಕೂ ಮುನ್ನ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಸ್ಪತ್ರೆಯ ವೀಕ್ಷಣೆ ನಡೆಸಿ, ಅಲ್ಲಿನ ಸೌಲಭ್ಯಗಳನ್ನು ನೋಡಿ ಸಂತಸ ಪಟ್ಟರು. 

ಬಳಿಕ ಅವರನ್ನು ಆ ಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಅವರು ನೂತನ ಆಸ್ಪತ್ರೆ ಉದ್ಘಾಟನಾ ಸ್ಮರಣಾರ್ಥ ಬಲೂನ್‍ಗಳನ್ನು ಹಾರಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು