ಹನೂರು ತಾಲ್ಲೂಕು ಶಿವಪುರ ಗ್ರಾಮದ ಬಳಿ ಆಟೋ ಪಲ್ಟಿ : ವೃದ್ಧೆ ಸಾವು

ಜಿ.ಕೆ.ಹೊಸೂರು ಗ್ರಾಮದ ದೊಡ್ಡಮ್ಮ ಮೃತಪಟ್ಟ ದುರ್ದೇವಿ 


ವರದಿ ಶಾರುಕ್ ಖಾನ್ ಹನೂರು 

ಹನೂರು : ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಆಟೋವೊಂದು  ಪಲ್ಟಿಯಾಗಿ ವೃದ್ದೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. 
ತಾಲ್ಲೂಕಿನ ಜಿ.ಕೆ.ಹೊಸೂರು ಗ್ರಾಮದ ದೊಡ್ಡಮ್ಮ ಮೃತಪಟ್ಟ ದುರ್ದೇವಿಯಾಗಿದ್ದು, ಮಂಗಲ ಗ್ರಾಮದಿಂದ ಜಿ.ಕೆ.ಹೊಸೂರು ಗ್ರಾಮಕ್ಕೆ ಅಟೋದಲ್ಲಿ ಪತಿ ಸಿದ್ದೆಗೌಡ ಅವರೊಂದಿಗೆ ತೆರಳುತ್ತಿದ್ದ ವೇಳೆ ಶಿವಪುರ  ಗ್ರಾಮದ ಬಳಿ ಈ ಅವಘಡ ಸಂಭಂವಿಸಿದೆ.
ಘಟನೆಯಲ್ಲಿ ಸಿದ್ದೇಗೌಡ ಸೇರಿದಂತೆ ಮತ್ತೊಬ್ಬ ಪ್ರಯಾಣಿಕರಿಗೂ ಗಾಯವಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.