ರಾಮಾಪುರ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ, ಚಿನ್ನಾಭರಣ, ನಗದು ವಶ

ವರದಿ-ಶಾರುಕ್ ಖಾನ್, ಹನೂರು

ಹನೂರು : ಇಬ್ಬರು ಖತರ್‍ನಾಕ್ ಮನೆಗಳ್ಳರನ್ನು ಬಂಧಿಸಿರುವ ರಾಮಾಪುರ ಪೊಲೀಸರು ಅವರಿಂದ 100 ಗ್ರಾಂ ಚಿನ್ನ, 6 ಸಾವಿರ ರೂ. ಮೌಲ್ಯದ ಬೆಳ್ಳಿ ಮತ್ತು 47 ಸಾವಿರ ನಗದು ವಶಕ್ಕೆ ಪಡೆದು ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವೇಲುಸ್ವಾಮಿ ಅಲಿಯಾಸ್ ವೇಲು ಹಾಗೂ ಶಿವರಾಜ್ ಬಂಧಿತ ಆರೋಪಿಗಳು. ಅಕ್ಟೋಬರ್ 19 ರಂದು ರಾಮಾಪುರ ಗ್ರಾಮದ ಮಲ್ಲಿಗ ಎಂಬುವರು ತಮ್ಮ ಮನೆಗೆ ಬೀಗ ಹಾಕಿ ತಮಿಳುನಾಡಿಗೆ ಹೋಗಿದ್ದನ್ನು ನೋಡಿಕೊಂಡು ಹೊಂಚು ಹಾಕಿದ ಕಳ್ಳರು ಮಲ್ಲಿಗಾ ಮನೆಯ ಬೀಗ ಮುರಿದು ಕಳವು ಮಾಡಿದ್ದರು. ಈ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಿಸಿಕೊಂಡ ರಾಮಾಪುರ ಠಾಣೆಯ ಇನ್ಸ್ ಪೆಕ್ಟರ್ ನಂಜುಂಡಸ್ವಾಮಿ, ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಿ ಗರಿಕೆ ಕಂಡಿ ಹತ್ತಿರ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ದಾಳಿಯಲ್ಲಿ ಪಿಎಸ್‍ಐ ಮಂಜುನಾಥ್ ಪ್ರಸಾದ್, ಎಎಸ್‍ಐ ಗುರುಸ್ವಾಮಿ, ಸಿಬ್ಬಂದಿಗಳಾದ ಗಿರೀಶ್, ಲಿಯಾಖತ್ ಅಲಿಖಾನ್, ಅಣ್ಣಾದೊರೈ, ರಮೇಶ್ ಕುಮಾರ್, ಪರಮೇಶ್, ರಾಚಪ್ಪ, ಅಮಗೊಂಡ ಬಿರಾದರ್ ಮಕಂದರ್ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು