ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ : ಹುಣಸೂರಿನಿಂದ ಹರೀಶ್ ಗೌಡ ಸ್ಪರ್ಧೆ

ಜನವರಿ ತಿಂಗಳಿನಲ್ಲಿ ಎಚ್.ಡಿ.ದೇವೇಗೌಡರಿಂದ ಚಂಡಿಕಾ ಹೋಮ

ಮೈಸೂರು : ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೈಸೂರು ಭಾಗದ ವಿವಿಧ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಬಿಡುಗಡೆಗೊಳಿಸಿದರು.
ಜೆಡಿಎಸ್ ವರಿಷ್ಠ ನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ, ಹುಣಸೂರಿನಿಂದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ, ಕೆ.ಆರ್.ನಗರ ಸಾ.ರಾ.ಮಹೇಶ್, ಟಿ.ನರಸೀಪುರ ಅಶ್ವಿನ್ ಕುಮಾರ್, ಎಚ್.ಡಿ.ಕೋಟೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‍ಗೆ ಟಿಕೆಟ್ ಖಚಿತ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ನಾನು ನಿನ್ನೆಯಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಮೂರು ವರ್ಷಗಳ ನಂತರ ನನ್ನ ಮನಸ್ಸು ಸಮಾಧಾನದಲ್ಲಿದೆ. ನಾನು ಮತ್ತು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲಗಳು ಉಳಿದಿಲ್ಲ, ಚಾಮುಂಡಿ ತಾಯಿಗೆ ಎಚ್.ಡಿ.ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳಲಲ್ಲಿ ನಾನು ನಡೆದಾಡುವಂತೆ ಶಕ್ತಿ ಕೊಡು ತಾಯಿ ಎಂದು ಬೇಡಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ಎಚ್.ಡಿ.ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ಎಚ್.ಡಿ.ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನು ಸಂತೋಷವಾಗಿದ್ದರೇ ನಮಗೂ ಸಂತೋಷ ಎಂದು ಹೇಳಿದರು.
ಈ ಮಧ್ಯೆ ಮೈಸೂರು ವಿಭಾಗದ ಚುನಾವಣಾ ಉಸ್ತುವಾರಿಯನ್ನೂ ಸಹ ಎಚ್.ಡಿ.ದೇವೇಗೌಡರು ಜಿಟಿಡಿ ಹೆಗಲಿಗೆ ಹೊರಿಸಿದ್ದಾರೆ ಎನ್ನಲಾಗಿz
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು