ಜಿ.ಟಿ.ದೇವೇಗೌಡ್ರ ವಿರುದ್ಧ ಮಾತಾಡಿದ್ರೆ ಪಕ್ಷದಿಂದ ಔಟ್ ಮರಿಗೌಡ್ರು ಪರ ದೊಡ್ಡಗೌಡ್ರು ಭರ್ಜರಿ ಬ್ಯಾಟಿಂಗ್

ಜಿಟಿಡಿ ವಿರೋಧಿಗಳಿಗೆ ಎಚ್‍ಡಿಡಿ ಖಡಕ್ ವಾರ್ನಿಂಗ್ 

ಮೈಸೂರು : ಜಿ.ಟಿ.ದೇವೇಗೌಡರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರು ನಾನು ಸಹಿಸುವುದಿಲ್ಲಾ. ಅಪಸ್ವರ ಎತ್ತುವವರು ಪಕ್ಷದಿಂದ ಹೊರಗೆ ಹೋಗಬಹುದು ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿಂದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿಟಿಡಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ಚುನಾವಣೆಗಳು ನಡೆಯುತ್ತವೆ. ಅವರ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ. ಎಂದು ಜಿಟಿಡಿ ವಿರೋಧಿಗಳಿಗೆ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ ದೇವೇಗೌಡರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.