ಅರ್ಥಪೂರ್ಣವಾಗಿ ಜರುಗಿದ ಚಿತ್ರನಟ, ಬಿಜೆಪಿ ಮುಖಂಡ ಜಯಪ್ರಕಾಶ್ ಗೌಡ (ಜೆಪಿ) ಹುಟ್ಟುಹಬ್ಬ

ಆರೋಗ್ಯ ತಪಾಸಣೆ, ವೃದ್ಧರಿಗೆ ಕನ್ನಡಕ, ಅಂಗವಿಕಲರಿಗೆ ಸಲಕರಣೆ  ವಿತರಣೆ

ಜಯಪ್ರಕಾಶ್ ಅವರಿಗೆ ಶುಭಾಶಯ ಕೋರಿದ ಗಣ್ಯರು

ಮೈಸೂರು : ಚಲನಚಿತ್ರ ನಟ, ಬಿಜೆಪಿ ಮುಖಂಡ ಹಾಗೂ ಸೆನೆಟ್ ಮಾಜಿ ಸದಸ್ಯ ಎಸ್.ಜಯಪ್ರಕಾಶ್ ಗೌಡ (ಜೆಪಿ) ಅವರ ಹುಟ್ಟುಹಬ್ಬವನ್ನು ಜೆಪಿ ಅಭಿಮಾನಿಗಳು ಶುಕ್ರವಾರ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಏರ್ಪಡಿಸಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ನೂರಾರು ಜನರು ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಸಕ್ಕರೆ ಕಾಯಿಲೆ, ರಕ್ತದೊತ್ತಡ, ದೀರ್ಘಕಾಲದ ಅಸ್ವಸ್ಥತೆ, ತಲೆನೋವು, ಕಣ್ಣಿನ ದೋಷ, ಚರ್ಮ ಕಾಯಿಲೆ, ಅಂಗವೈಕಲ್ಯ ಮುಂತಾದ ನೂರಾರು ರೋಗಿಗಳಿಗೆ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿ ಸಹ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಣ್ಣಿನ ದೋಷವುಳ್ಳ ಹಲವಾರು ವೃದ್ಧರಿಗೆ ಉಚಿತವಾಗಿ ಅತ್ಯುತ್ತಮ ಗುಣಮಟ್ಟದ ಕನ್ನಡಕ ವಿತರಣೆ ಮಾಡಲಾಯಿತು.
ಜೆಎಸ್‍ಎಸ್, ಸರ್ಕಾರಿ ಆಯುರ್ವೇದ ಸೇರಿದಂತೆ ನಗರದ ವಿವಿಧ ಪ್ರಮುಖ ಆಸ್ಪತ್ರೆಗಳ ವೈದ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.
ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಸೇರಿದಂತೆ ಹಲವಾರು ಗಣ್ಯರು ಜೆಪಿ ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದರು.

ಇಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿದ ಜಯಪ್ರಕಾಶ್ ಗೌಡ ಅವರು, ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಅಭಿಮಾನಿಗಳು ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು.

ನಂತರ ಮಾತನಾಡಿದ ಅವರು, ಪ್ರತಿವರ್ಷವೂ ನಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳು ಪ್ರೀತಿಯಿಂದ ನನ್ನ ಹುಟ್ಟುಹಬ್ಬವನ್ನು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೂ ಸಹ ಆಕಾಂಕ್ಷಿಯಾಗಿದ್ದು, ಪಕ್ಷ ಯಾವ ಕ್ಷೇತದಲ್ಲೆ ಸ್ಪರ್ಧೆ ಮಾಡಲು ಅವಕಾಶ ನೀಡುತ್ತದೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದರು. 
ಆರೋಗ್ಯ ತಪಾಸಣೆಗೆ ಆಗಮಿಸಿದ್ದ ಎಲ್ಲರಿಗೂ ಬೆಳಗಿನ ಉಪಹಾರ, ಮದ್ಯಾಹ್ನದ ಭೋಜನ ಏರ್ಪಡಿಸಲಾಗಿತ್ತು. 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು