ಜೆಡಿಎಸ್ ಮುಖಂಡ ಮಂಜುನಾಥ್ ಅಭಿಮಾನಿಗಳಿಂದ ಡಾ.ರಾಜ್ ತವರೂರು ಸಿಂಗಾನೆಲ್ಲೂರು ಗ್ರಾಮದಲ್ಲಿ ನಾಳೆ `ಅಪ್ಪು ನಮನ’ ಕಾರ್ಯಕ್ರಮ

ರಕ್ತದಾನ, ನೇತ್ರದಾನಕ್ಕೆ ನೋಂದಣಿ, ಮನೋರಂಜನೆಯ ಮಹಾಸಂಜೆಯಲ್ಲಿ ರಸಮಂಜರಿ, ಹಾಸ್ಯಸಂಜೆ

ವರದಿ-ಶಾರುಕ್ ಖಾನ್, ಹನೂರು

ಹನೂರು : ನಟಸಾರ್ವಭೌಮ ಡಾ.ರಾಜಕುಮಾರ್ ತವರೂರು ಸಿಂಗಾನೆಲ್ಲೂರು ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ನಾಳೆ ಅ.29 ರಂದು ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಆರ್.ಮಂಜುನಾಥ್
ಜೆಡಿಎಸ್ ಮುಖಂಡರು, ಹನೂರು ಕ್ಷೇತ್ರ

ಹನೂರು ಕ್ಷೇತ್ರದ ಜೆಡಿಎಸ್ ಮುಖಂಡ ಆರ್.ಮಂಜುನಾಥ್ ಅಭಿಮಾನಿ ಬಳಗದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, `ಅಪ್ಪು’  ನೆನಪಿನಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜತೆಗೆ ಶಾಲಾ ಮಕ್ಕಳಿಂದ ನೃತ್ಯ,  ಕೋವಿಡ್ ವಾರಿಯರ್ಸ್‍ಗಳಿಗೆ ಸನ್ಮಾನ, ಬೃಹತ್ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮೂರಿನ ಕುಡಿ ಅಪ್ಪು ರವರಿಗೆ ನಮನ ಸಲ್ಲಿಸಬೇಕೆಂದು ಎಂ.ಆರ್. ಮಂಜುನಾಥ್ ವಿನಂತಿಸಿದ್ದಾರೆ. 
ಇದೇ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ಗಾಯಕರಾದ 
ಚೆನ್ನಪ್ಪ, ಕಂಬದ ರಂಗಯ್ಯ ಹಾಗೂ ಗಾಯಕಿ ಪೃಥ್ವಿಭಟ್ ಅವರಿಂದ ಗಾಯನ ಏರ್ಪಡಿಸಲಾಗಿದೆ. ವೇದಿಕೆಯ ಪ್ರಮುಖ ಆಕರ್ಷಣೆ ನಮ್ಮ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮತ್ತು ಜನರನ್ನು ನಕ್ಕು ನಲಿಸಲು ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಚಂದ್ರಪ್ರಭಾ, ಚಿಲ್ಲರ್ ಮಂಜು, ಶಿವು  ಮುಂತಾದವರು ಭಾಗವಹಿಸಲಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು